
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ವೀಕ್ಷಿಸಲು ಮಹಿಳಾ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಶನಿವಾರ 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಅಪ್ಪು ದರ್ಶನ ಮಾಡಿದ್ದು, ಭಾನುವಾರ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ. ಇನ್ನೂ, ಇಂದು ಸೋಮವಾರ ಕೂಡ ಸಾವಿರಾರು ಮಂದಿ ಮಹಿಳೆಯರು ಅಪ್ಪು ಸಮಾಧಿ ವೀಕ್ಷಿಸಲು ಬಂದಿದ್ದರು.
‘ಅಂದು ಬರಲಿಕ್ಕೆ ನಮ್ಮ ಬಳಿ ಹಣ ಇರಲಿಲ್ಲ, ಈಗ ಸರ್ಕಾರ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದೆ . ಹಾಗಾಗಿ ಅಪ್ಪು ಸಮಾಧಿ ವೀಕ್ಷಿಸಲು ಬಂದೆವು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

