
ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಭಾರತವನ್ನು ಬಿಜೆಪಿಯವರು ಯಾವ ದೇಶ ಮಾಡಲು ಹೊರಟಿದ್ದಾರೆ? ನಾವು ಅಧಿಕಾರಕ್ಕೆ ಬಂದರೆ ಭಾರತವನ್ನು ಪಾಕಿಸ್ತಾನ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ. ನಾವ್ಯಾಕೆ ಪಾಕಿಸ್ತಾನ ಮಾಡೋಣ? ಇಂದಿರಾ ಗಾಂಧಿ, ಶಾಸ್ತ್ರಿ ದೇಶ ರಕ್ಷಿಸುವ ಕೆಲಸ ಮಾಡಿದರು. ಶಾಸ್ತ್ರಿಯವರು ಇದ್ದಾಗ ಪಾಕಿಸ್ತಾನವನ್ನು ಸೋಲಿಸಿದರು. ಇಂದಿರಾ ಗಾಂಧಿ ಬಾಂಗ್ಲಾ ವಿರುದ್ಧ ಗೆದ್ದಾಗ ಹೀಗೆಲ್ಲ ಮಾಡಿದ್ರಾ? ಎಂದು ಪ್ರಶ್ನಿಸಿದರು.
ನಮ್ಮ ಯೋಧರನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ ಎಂದರು. ಜನರ ನಡುವೆ ಜಗಳ ಹಚ್ಚಿದ್ದು ಬಿಟ್ಟರೆ ಬಿಜೆಪಿಯವರು ಮಾಡಿದ್ದೇನು? ಎಂದು ಕೇಳಿದ್ದಾರೆ.

