HomeKarnatakaBIG NEWS: ಬಿಜೆಪಿ ಸಂಸದರ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು; ಮುನಿಸ್ವಾಮಿ ಮೊದಲನೇ ಹುಚ್ಚ...

BIG NEWS: ಬಿಜೆಪಿ ಸಂಸದರ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು; ಮುನಿಸ್ವಾಮಿ ಮೊದಲನೇ ಹುಚ್ಚ ವೆಂಕಟ್, ಮೆಂಟಲ್ ಮುನಿಸ್ವಾಮಿ……ಎಂದು ಕಿಡಿ


ಬೆಂಗಳೂರು: ಬಿಜೆಪಿ ಸಂಸದರು ಹಾಗೂ ಕಾಂಗ್ರೆಸ್ ಸಚಿವರು, ಶಾಸಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಶಾಸಕ ಪ್ರದೀಪ್ ಈಶ್ವರ್ 2ನೇ ಹುಚ್ಚ ವೆಂಕಟ್ ಎಂದು ಹೇಳಿದ್ದ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರದೀಪ್ ಈಶ್ವರ್, ಮೆಂಟಲ್ ಮುನಿಸ್ವಾಮಿ ಎಂದು ಕೋಲಾರ ಸಂಸದರ ಹೆಸರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ನನ್ನನ್ನು 2ನೇ ಹುಚ್ಚ ವೆಂಕಟ್ ಎಂದು ಹೇಳಿರುವ ಸಂಸದ ಮುನಿಸ್ವಾಮಿ ಮೊದಲನೇ ಹುಚ್ಚ ವೆಂಕಟ್. ಸಂಸದ ಮುನಿಸ್ವಾಮಿ ರೌಡಿಶೀಟರ್. ಅವರ ಮೇಲೆ ಕೇಸ್ ಗಳಿವೆ. ನಾನು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ವೈಯಕ್ತಿಕವಾಗಿ ಮಾತನಾಡಿದರೆ ನಾನೂ ಕೂಡ ಮಾತನಾಡುತ್ತೇನೆ. ಬಿಜೆಪಿ ಸಂಸದರು ಚೈಲ್ಡ್ ಆರ್ಟಿಸ್ಟ್ ಗಳು. ಅವರಿಗೆ ಸ್ವಂತ ಬಲದಲ್ಲಿ ಗೆಲ್ಲುವ ಸಾಮರ್ಥ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular