HomeIndiaಅಧಿಕಾರಿ ಮನೆಯಲ್ಲಿದ್ದ ಹಣ ಕಂಡು ದಾಳಿ ಮಾಡಿದ ಪೊಲೀಸರೇ ದಂಗಾದ್ರು: ಪಕ್ಕದ ಮನೆಗಳ ಮೇಲೆ ನೋಟಿನ...

ಅಧಿಕಾರಿ ಮನೆಯಲ್ಲಿದ್ದ ಹಣ ಕಂಡು ದಾಳಿ ಮಾಡಿದ ಪೊಲೀಸರೇ ದಂಗಾದ್ರು: ಪಕ್ಕದ ಮನೆಗಳ ಮೇಲೆ ನೋಟಿನ ಕಂತೆ ಎಸೆದ ಪತ್ನಿ

ಒಡಿಶಾ ಪೊಲೀಸ್ ವಿಜಿಲೆನ್ಸ್ ವಿಭಾಗ ಶುಕ್ರವಾರ ರಾಜ್ಯದ ವಿವಿಧ ಸ್ಥಳಗಳಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿದಾಗ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಬರಂಗಪುರ ಜಿಲ್ಲೆಯ ಹೆಚ್ಚುವರಿ ಉಪ-ಕಲೆಕ್ಟರ್ ಆಗಿ ನಿಯೋಜನೆಗೊಂಡ ಒಡಿಶಾ ಆಡಳಿತ ಅಧಿಕಾರಿ(ಒಎಎಸ್) ಪ್ರಶಾಂತ ಕುಮಾರ್ ರೌತ್ ಅವರ ಬಳಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಭುವನೇಶ್ವರ್, ನಬರಂಗ್‌ ಪುರ ಮತ್ತು ಇತರ ಸ್ಥಳಗಳಲ್ಲಿನ ಅವರ ನಿವಾಸಗಳ ಮೇಲೆ ನಡೆದ ದಾಳಿ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾನನ್ ವಿಹಾರ್‌ ನಲ್ಲಿರುವ ತಮ್ಮ ನೆರೆಹೊರೆಯವರ ಟೆರೇಸ್‌ ಗೆ ಆರೋಪಿ ಅಧಿಕಾರಿಯ ಪತ್ನಿ ನಗದು ಇದ್ದ 6 ರಟ್ಟಿನ ಪೆಟ್ಟಿಗೆಗಳನ್ನು ಎಸೆದಿದ್ದಾರೆ. ವಿಂಗ್‌ ನ ಸಿಬ್ಬಂದಿ ಅಲ್ಲಿಗೆ ಬಂದಾಗ ಹಣ ಮರೆಮಾಡಲು ಹೀಗೆ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ನೆರೆಹೊರೆಯವರ ಮನೆಯಿಂದ ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಯಿತು. ಹಣ ಎಣಿಸಲು ಅನೇಕ ಎಣಿಕೆ ಯಂತ್ರಗಳನ್ನು ಬಳಸಲಾಯಿತು ಎಂದು ಹೇಳಿದ್ದಾರೆ.

ರೌತ್ ಅವರ ನಬರಂಗಪುರ ನಿವಾಸದಿಂದ ಇನ್ನೂ 89.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಯಿಂದ ವಶಪಡಿಸಿಕೊಂಡ ನಗದು ಪ್ರಮಾಣದಲ್ಲಿ ಇದು ಎರಡನೇ ಅತಿದೊಡ್ಡ ವಸೂಲಿಯಾಗಿದೆ. ಏಪ್ರಿಲ್ 2022 ರಲ್ಲಿ, ಗಂಜಾಂನ ಸಣ್ಣ ನೀರಾವರಿ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡ ಕಾರ್ತಿಕೇಶ್ವರ್ ರೌಲ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿದಾಗ ನಾವು 3.41 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular