HomeEntertainmentWatch Video | ಕಚ್ಚಾ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಬಾಲಕ

Watch Video | ಕಚ್ಚಾ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಬಾಲಕ

2022ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ’ಕಚ್ಚಾ ಬಾದಾಮ್’ ಹಾಡಿಗೆ ಸ್ಟೆಪ್ ಹಾಕದವರೇ ಇಲ್ಲ. ಪಶ್ಚಿಮ ಬಂಗಾಳದ ಬೀದಿ ವ್ಯಾಪಾರಿ ಭುಬನ ಬಂಡ್ಯಾಕರ್‌ ತಮ್ಮ ವ್ಯಾಪಾರದ ವೇಳೆ ಗಿರಾಕಿಗಳನ್ನು ಸೆಳೆಯಲು ಹಾಡಿದ್ದ ಹಾಡಿಗೆ ರೀಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ ಬಳಿಕ ಅದು ದೇಶವಾಸಿಗಳಿಗೆ ಹುಚ್ಚು ಹಿಡಿಸಿತ್ತು.

ಈ ಹಾಡಿಗೆ ಸ್ಟೆಪ್ ಹಾಕಿಕೊಂಡು ತಮ್ಮದೂ ಒಂದು ವಿಡಿಯೋ ಇರಲಿ ಎಂಬಂತೆ ಸೆಲೆಬ್ರಿಟಿಗಳಿಂದ ಜನಸಾಮಾನ್ಯರವರೆಗೂ ದೇಶವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮಟ್ಟಿಗೆ ಸಾಮೂಹಿಕ ಟ್ರೆಂಡ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಾದ ವರ್ಷದ ಬಳಿಕವೂ ಹಾಡಿನ ಕ್ರೇಜ಼್ ಕಡಿಮೆಯಾದಂತೆ ಕಾಣುತ್ತಿಲ್ಲ. ಪಾಕಿಸ್ತಾನದ ಬಾಲಕನೊಬ್ಬ ಈ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಮದುವೆ ಸಮಾರಂಭವೊಂದರ ವೇಳೆ ಸ್ಟೆಪ್ ಹಾಕುವ ಬಾಲಕನ ಈ ಕುಣಿತವನ್ನು ಅಲ್ಲಿದ್ದ ಅತಿಥಿಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular