HomeCrimeBIG NEWS: ಮನೆಯಲ್ಲಿಯೇ 26 ವರ್ಷದ ಮಹಿಳೆ ಶವವಾಗಿ ಪತ್ತೆ; ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

BIG NEWS: ಮನೆಯಲ್ಲಿಯೇ 26 ವರ್ಷದ ಮಹಿಳೆ ಶವವಾಗಿ ಪತ್ತೆ; ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

ಚಿಕ್ಕಬಳ್ಳಾಪುರ: ಮನೆಯ ರೂಮಿನಲ್ಲೇ 26 ವರ್ಷದ ಗೃಹಿಣಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಕಾರ್ಖಾನೆ ಪೇಟೆಯಲ್ಲಿ ನಡೆದಿದೆ.

26 ವರ್ಷದ ತೇಜಸ್ವಿನಿ ಮೃತ ಮಹಿಳೆ. ಪತಿ ಲೋಹಿತ್, ಮೈದುನ ಗೋಪಿ ಹಾಗೂ ಸಂಬಂಧಿಕರು ತೇಜಸ್ವಿನಿಯನ್ನು ಹೊಡೆದು ನೇಣು ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂರು ದಿನಗಳ ಹಿಂದಷ್ಟೇ ತವರು ಮನೆಯಿಂದ ತಾಯಿ ಜೊತೆ ಬಂದಿದ್ದ ತೇಜಸ್ವಿನಿಯನ್ನು ಬಿಟ್ಟು ನಿನ್ನೆಯಷ್ಟೇ ತಾಯಿ ವಾಪಸ್ ತೆರಳಿದ್ದರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತೇಜಸ್ವಿನಿ, ತಂದೆಗೆ ಫೋನ್ ಮಾಡಿ ತನಗೆ ಪತಿ ಹಾಗೂ ಮನೆಯವರು ಹೊಡೆದು ಬಡಿದು ಮಾಡುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ. ಆದರೂ ತನ್ನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದೀರಾ ಎಂದು ಕಣ್ಣೀರಿಟ್ಟಿದ್ದಳು.

ತಾವು ಮನೆಗೆ ಬಂದು ಮಾತನಾಡುವುದಾಗಿ ಹೇಳಿ ತಂದೆ, ಮಗಳ ಮನೆಗೆ ಹೊರಟಿದ್ದರು. ತಂದೆ ಬಂದು ನೋಡುವಷ್ಟರಲ್ಲಿ ಮಗಳು ಪತಿಯ ರೂಮಿನಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಒಂದು ವರ್ಷದ ಹಿಂದಷ್ಟೇ ತೇಜಸ್ವಿನಿ ಹಾಗೂ ಲೋಹಿತ್ ವಿವಾಹವಾಗಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಹತ್ಯೆಗೈದಿದ್ದಾರೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

ಸ್ಥಳಕ್ಕೆ ನಗರ ಠಾಣೆ ಪೊಲೀಸರು, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular