ದಿನಕ್ಕೊಂದು ಚಿತ್ರವಿಚಿತ್ರ ಕಾರಣಗಳಿಗೆ ದೆಹಲಿ ಮೆಟ್ರೋ ಸುದ್ದಿಯಾಗುತ್ತಿದೆ. ಯುವ ಪ್ರಣಯಿಗಳ ಚುಂಬನ, ಟೂಪೀಸ್ ಧಾರಿ ಹೆಂಗಸು, ರೀಲ್ಸ್ ಸೃಷ್ಟಿಕರ್ತರ ಅವಾಂತರಗಳಂಥ ಕಾರಣಗಳಿಂದ ಈಗೀಗ ದೆಹಲಿ ಮೆಟ್ರೋ ಎಂದರೆ ಏನಾದರೊಂದು ವಿಚಿತ್ರವೇ ನೆನಪಾಗುವ ಹಾಗೆ ಆಗಿದೆ.
ಇದೇ ದೆಹಲಿ ಮೆಟ್ರೋದ ರೈಲೊಂದು ಪವರ್ ಸಾಕೆಟ್‌ನಲ್ಲಿ ಕೂದಲು ನೆಟ್ಟಗಾಗಿಸುವ ಯಂತ್ರವೊಂದನ್ನು ಸಿಕ್ಕಿಸಿಕೊಂಡು ಕೂದಲು ನೇರವಾಗಿಸಿಕೊಳ್ಳುತ್ತಿರುವ ಯುವತಿಯೊಬ್ಬಳ ವಿಡಿಯೋ ಸುದ್ದಿ ಮಾಡುತ್ತಿದೆ.
“ನಾಳೆ ಯಾರಾದರೂ ವಾಷಿಂಗ್ ಮಶೀನ್ ಅಥವಾ ಐರನ್ ಬಾಕ್ಸನ್ನು ಯಾರಾದರೂ ಪ್ಲಗ್ ಇನ್ ಮಾಡಬಹುದು,” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಭಾರೀ ವೈರಲ್ ಆಗಿರುವ ವಿಡಿಯೋಗೆ ಅದಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.
https://twitter.com/HasnaZarooriHai/status/1670119257215238145?ref_src=twsrc%5Etfw%7Ctwcamp%5Etweetembed%7Ctwter
Ridiculous.
— H R Viswanath (@HRViswanath1) June 18, 2023
Kal washing machine aur iron bhi plug in kar lena. Jaldi dande padenge police ke
— Parul Rohatgi (@rohatgi_parul) June 17, 2023

