HomeIndiaಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ....!

ಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ….!

ಈಗಾಗಲೇ ಐದು ವಿವಾಹವಾಗಿರುವ ವ್ಯಕ್ತಿಯೊಬ್ಬ ಈಗ ಮತ್ತೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದು, ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಶಾಮ್ಲಿ ಜಿಲ್ಲೆಯ ಚಪ್ರೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈಗಾಗಲೇ ಐದು ವಿವಾಹವಾಗಿರುವ ರಶೀದ್ ಎಂಬಾತ ಈಗ 19 ವರ್ಷದ ಹಿಂದೂ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆಯೊಂದಿಗೆ ವಿವಾಹವಾಗಲು ಇಸ್ಲಾಂ ಗೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ವಾಮಿ ಯಶ್ವೀರ್ ಸಿಂಗ್ ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ರಶೀದ್ ಜೊತೆ ಹೋಗಿರುವ ಯುವತಿಯನ್ನು ಜೂನ್ 22 ರೊಳಗೆ ಆಕೆಯ ಕುಟುಂಬಸ್ಥರ ವಶಕ್ಕೆ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular