HomeKarnatakaಅಪ್ಪ ಬೈದಿದ್ದಕ್ಕೆ ಉಚಿತ ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಅಪ್ರಾಪ್ತ ಸಹೋದರಿಯರು....!

ಅಪ್ಪ ಬೈದಿದ್ದಕ್ಕೆ ಉಚಿತ ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಅಪ್ರಾಪ್ತ ಸಹೋದರಿಯರು….!

ಸೂಪರ್ ಮಾರ್ಕೆಟ್ ನಿಂದ ಪದೇ ಪದೇ ಚಾಕೊಲೇಟ್ ತರುತ್ತಾರೆಂದು ತಮ್ಮ ತಂದೆ ಬೈದ ಕಾರಣಕ್ಕೆ 13 ಹಾಗೂ 10 ವರ್ಷದ ಇಬ್ಬರು ಅಪ್ರಾಪ್ತ ಸಹೋದರಿಯರು ‘ಶಕ್ತಿ’ ಯೋಜನೆಯಡಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ ಲಾಭ ಪಡೆದು ಧರ್ಮಸ್ಥಳಕ್ಕೆ ಪ್ರಯಾಣಿಸಿದ ಘಟನೆ ನಡೆದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಶನಿವಾರದಂದು ಈ ಇಬ್ಬರು ಸಹೋದರಿಯರು ಕಾಣೆಯಾದ ಸಂಬಂಧ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಈ ಇಬ್ಬರು ಅಪ್ರಾಪ್ತರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ತೆರಳಿರುವುದು ಕಂಡುಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರದಂದು ಧರ್ಮಸ್ಥಳದ ಬಸ್ಸಿನಲ್ಲಿ ವಾಪಾಸ್ ಬೆಂಗಳೂರಿಗೆ ಬರುತ್ತಿದ್ದ ಮಹಿಳೆಯೊಬ್ಬರಿಗೆ ಪೋಷಕರಿಲ್ಲದೆ ಪ್ರಯಾಣಿಸುತ್ತಿದ್ದ ಈ ಇಬ್ಬರು ಹೆಣ್ಣು ಮಕ್ಕಳು ಕಣ್ಣಿಗೆ ಬಿದ್ದಿದ್ದಾರೆ. ಅವರನ್ನು ಮಾತನಾಡಿಸಿದ ಮಹಿಳೆ ಬಳಿಕ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು, ಮಕ್ಕಳನ್ನು ನಿಮ್ಮ ವಶದಲ್ಲಿಯೇ ಇಟ್ಟುಕೊಳ್ಳಿ ಎಂದು ಮಹಿಳೆಗೆ ತಿಳಿಸಿದ್ದು, ಬಳಿಕ ನೆಲಮಂಗಲದ ಬಳಿ ಮಕ್ಕಳನ್ನು ಇಳಿಸಿಕೊಂಡು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular