HomeEntertainmentVideo | ತಮನ್ನಾ ಜೊತೆಗಿನ ವಿರಾಟ್ ಕೊಹ್ಲಿ ಜಾಹೀರಾತು ವೈರಲ್; ಅನುಷ್ಕಾ ಅತ್ತಿಗೆ ಇಲ್ಲಿ ನೋಡಿ...

Video | ತಮನ್ನಾ ಜೊತೆಗಿನ ವಿರಾಟ್ ಕೊಹ್ಲಿ ಜಾಹೀರಾತು ವೈರಲ್; ಅನುಷ್ಕಾ ಅತ್ತಿಗೆ ಇಲ್ಲಿ ನೋಡಿ ಎಂದ ಫ್ಯಾನ್ಸ್

ತಮನ್ನಾ ಭಾಟಿಯಾ, ನಟ ವಿಜಯ್ ವರ್ಮಾ ಅವರೊಂದಿಗಿನ ಸಂಬಂಧ ವಿಷಯವಾಗಿ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ತಮನ್ನಾ ಇತ್ತೀಚೆಗೆ ತನ್ನ ಲಸ್ಟ್ ಸ್ಟೋರೀಸ್ 2 ಸಹನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುವುದನ್ನು ದೃಢಪಡಿಸಿದ್ದು ಅವರೊಂದಿಗಿರುವುದು ಸಂತೋಷಕರ ಎಂದು ಹೇಳಿದ್ದರು. ಈ ಎಲ್ಲದರ ನಡುವೆ ತಮನ್ನಾ ಮತ್ತು ವಿರಾಟ್ ಕೊಹ್ಲಿಯನ್ನು ಒಳಗೊಂಡ ಹಳೆಯ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿರುವ ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಹಲವು ವರ್ಷಗಳ ಹಿಂದೆ ಜಾಹೀರಾತೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಹಳೆಯ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಡೇಟಿಂಗ್ ವದಂತಿಗಳನ್ನು ಸಹ ಹುಟ್ಟು ಹಾಕಿದ್ದರು. ಅವರು ಒಟ್ಟಿಗೆ ಇದ್ದಾರೆ ಎಂದು ವರದಿಗಳಾಗಿದ್ದರೂ 2018 ರಲ್ಲಿ ಜಾಹೀರಾತಿನ ಚಿತ್ರೀಕರಣ ಮಾಡುವಾಗ ವಿರಾಟ್‌ನೊಂದಿಗೆ ಕೇವಲ ನಾಲ್ಕು ಪದಗಳನ್ನು ವಿನಿಮಯ ಮಾಡಿಕೊಂಡಿದ್ದೆ ಅಷ್ಟೇ ಎಂದು ತಮನ್ನಾ ಸ್ಪಷ್ಟಪಡಿಸಿದ್ದರು. ಅದರ ನಂತರ ನಾನು ವಿರಾಟ್ ಅವರನ್ನು ಭೇಟಿ ಮಾಡಿಲ್ಲ ಅಥವಾ ಮಾತನಾಡಿಲ್ಲ ಎಂದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ತಮನ್ನಾ ಮತ್ತು ವಿರಾಟ್ ಅವರ ಹಳೆಯ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕ್ರಿಕೆಟಿಗನ ನಟನಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅಭಿಮಾನಿಯೊಬ್ಬರು “ಹಾ ಅನುಶ್ಕಾ ಭಾಭಿ, ವಿರಾಟ್ ಭಾಯ್ ಕೊ ಸಂಭಾಲ್ ಲೋ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅನುಷ್ಕಾ ಅವರನ್ನು ಟ್ಯಾಗ್ ಮಾಡಿ, “ಇಲ್ಲಿ ಏನಾಗುತ್ತಿದೆ ನೋಡಿ !” ಎಂದು ಎಚ್ಚರಿಸುವಂತೆ ಕಮೆಂಟ್ ಮಾಡಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಅವರ ಮದುವೆಯ ಫೋಟೋಗಳ ಬಗ್ಗೆ ಮಾತನಾಡಿದ್ದ ತಮನ್ನಾ ಆನ್‌ಲೈನ್‌ನಲ್ಲಿ ಬಂದ ಅವರ ಮದುವೆ ಚಿತ್ರಗಳು ಸುಂದರವಾಗಿವೆ ಮತ್ತು ಇಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತಿದ್ದರು. ಅವರ ದಾಂಪತ್ಯ ಜೀವನ ತುಂಬಾ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular