ಬೆಂಗಳೂರು : ತಮಿಳುನಾಡು ಮೂಲದ ಮಕ್ಕಳ್ ಸಮುದಾಯ ನಿಧಿ ಪರ್ವೈ ಅಥವಾ ಪೀಪಲ್ಸ್ ಸೋಷಿಯಲ್ ಜಸ್ಟೀಸ್ ಕೌನ್ಸಿಲ್ (PSJC) ನಿಯೋಗದಿಂದ ಇ.ವಿ.ರಾಮಸಾಮಿ ‘ಪೆರಿಯಾರ್’ (E V Ramasamy ‘Periyar’ ) ವಿಗ್ರಹವನ್ನು ಕೆತ್ತಲಾಗಿರುವ 10 ಕೆಜಿ ಚಿನ್ನದ ಲೇಪಿತ ‘ಸೆಂಗೋಲ್’ (Sengole) ಅನ್ನು ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿರಾಕರಿಸಿದ್ದಾರೆ.
ಮಧುರೈನ 30 ಸದಸ್ಯರ ನಿಯೋಗವು ಸಾಮಾಜಿಕ ನ್ಯಾಯದ ಉಸ್ತುವಾರಿ ಎಂದು ಸಿದ್ದರಾಮಯ್ಯ ಅವರಿಗೆ ಸೆಂಗೋಲ್ ಅನ್ನು ನೀಡಲು ಬಯಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಸೆಂಗೋಲ್ ಅನ್ನು ಸ್ವೀಕರಿಸಲು ನಿರಾಕರಿಸಿದ್ದು, ದ್ರಾವಿಡ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾದ ಪೆರಿಯಾರ್ ಅವರ ಸರಳ ಫೋಟೋವನ್ನು ಪಿಎಸ್ಜೆಸಿ ಪ್ರತಿನಿಧಿಗಳಿಂದ ಸ್ವೀಕರಿಸಲು ಅವರು ಒಪ್ಪಿಕೊಂಡರು.
ಸೆಂಗೋಲ್ ಅನ್ನು ಸ್ವೀಕರಿಸದಿರುವ ನಿರ್ಧಾರವನ್ನು ಪಕ್ಷವೇ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆಗಸ್ಟ್ 14, 1947 ರಂದು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವನ್ನು ಅಧಿಕೃತವಾಗಿ ಜಾರಿಗೆ ತರಲು ಈ ಸಂಸತ್ ಕಟ್ಟಡವನ್ನು ಬಳಸಲಾಗಿರುವುದರಿಂದ ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಹೊಸ ಸಂಸತ್ ಕಟ್ಟಡದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದರು.