HomeIndiaಗೆಳೆಯನೊಂದಿಗೆ ಓಡಿಹೋಗಿ ಅಪಹರಣದ ಕಟ್ಟುಕಥೆ ಕಟ್ಟಿದ ಅಪ್ರಾಪ್ತೆ....!

ಗೆಳೆಯನೊಂದಿಗೆ ಓಡಿಹೋಗಿ ಅಪಹರಣದ ಕಟ್ಟುಕಥೆ ಕಟ್ಟಿದ ಅಪ್ರಾಪ್ತೆ….!

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಯುವತಿಯೊಬ್ಬಳು ತನ್ನನ್ನು ಅಪಹರಿಸಲಾಗಿದೆ ಎಂದು ಕಟ್ಟುಕಥೆ ಕಟ್ಟಿ ಗೆಳೆಯನೊಂದಿಗೆ ಕೊಲ್ಕತ್ತಾಗೆ ಓಡಿಹೋಗಿದ್ದ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ.

ಪಾಲ್ಘರ್‌ನ ವಿರಾರ್ ಪ್ರದೇಶದ ನಿವಾಸಿಯಾಗಿದ್ದು ಕಂಪನಿಯೊಂದರ ಹೌಸ್‌ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಶುಕ್ರವಾರ ಕೆಲಸಕ್ಕೆ ಹೋಗಿದ್ದಳು. ಆದರೆ ಸಂಜೆ ಮನೆಗೆ ಹಿಂತಿರುಗಿರಲಿಲ್ಲ . ನಂತರ ಆಕೆಯ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಆಕೆ ತನ್ನ ಸಹೋದರನಿಗೆ ವಾಟ್ಸಾಪ್ ಧ್ವನಿ ಸಂದೇಶ ಕಳಿಸಿದ್ದು ಅದರಲ್ಲಿ ತನ್ನನ್ನು ಅಪಹರಿಸಲಾಗಿದೆ ಎಂದು ಹೇಳಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಆಕೆಯ ಕುಟುಂಬದಿಂದ ದೂರನ್ನು ಸ್ವೀಕರಿಸಿದ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದರು.

ಪೊಲೀಸ್ ತನಿಖಾ ತಂಡವು ಕಾರ್ಯಾಚರಣೆಗಿಳಿದ ನಂತರ ಹುಡುಗಿ ತನ್ನ ಗೆಳೆಯನೊಂದಿಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ವಿಮಾನದಲ್ಲಿ ಹೋಗಿದ್ದಾಳೆ ಎಂದು ಕಂಡುಕೊಂಡಿತು. ಅವರಿಬ್ಬರ ಪತ್ತೆಗೆ ಪೊಲೀಸ್ ತಂಡ ಕೋಲ್ಕತ್ತಾಗೆ ತೆರಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular