HomeCrimeಮೈಮರೆಯುವಂತೆ ಕುಡಿದಿದ್ದ ಯುವತಿ ಹೊತ್ತೊಯ್ದು ಅತ್ಯಾಚಾರ; ಭಾರತೀಯ ವಿದ್ಯಾರ್ಥಿಗೆ 6 ವರ್ಷ ಜೈಲು

ಮೈಮರೆಯುವಂತೆ ಕುಡಿದಿದ್ದ ಯುವತಿ ಹೊತ್ತೊಯ್ದು ಅತ್ಯಾಚಾರ; ಭಾರತೀಯ ವಿದ್ಯಾರ್ಥಿಗೆ 6 ವರ್ಷ ಜೈಲು

ಮದ್ಯಪಾನದಿಂದ ಚಿತ್ತಾಗಿದ್ದ ಯುವತಿಯೊಬ್ಬರನ್ನು ಹೊತ್ತೊಯ್ದು ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. 20 ವರ್ಷದ ಪ್ರೀತ್ ವಿಕಾಲ್, ಸಂತ್ರಸ್ತೆಯನ್ನು ಹೊತ್ತೊಯ್ಯುತ್ತಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯದ ಅಂಗಳದಲ್ಲಿ ಸಾಕ್ಷಿಯಾಗಿ ತೋರಲಾಗಿದೆ.

ವೇಲ್ಸ್‌ನ ಕಾರ್ಡಿಫ್‌ನ ಕ್ಲಬ್ ಒಂದರ ಬಳಿ ಕಳೆದ ವರ್ಷ ಜೂನ್‌ನಲ್ಲಿ ಈ ಘಟನೆ ನಡೆದಿತ್ತು. ಸಂಗೀತ ಕಾರ್ಯಕ್ರಮ ನಡೆಯುವ ಈ ಸ್ಥಳದಲ್ಲಿ ವಿಪರೀತ ಮದ್ಯಪಾನದಿಂದ ಚಿತ್‌ ಆಗಿದ್ದ ಯುವತಿಯನ್ನು ಕಂಡ ಪ್ರೀತ್ ವಿಕಾಲ್ ಆಕೆಯನ್ನು ಅಲ್ಲಿಂದ ಹೊತ್ತೊಯ್ದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತ್ರಸ್ತೆಯನ್ನು ಹಾಸಿಗೆ ಮೇಲೆ ಬಿಸಾಡಿದ ಕೂಡಲೇ ತಾನೇನೋ ದೊಡ್ಡ ಸಾಧನೆಗೈದವನ ಹಾಗೆ ಆಕೆಯ ಫೋಟೋವನ್ನೂ ಸಹ ಈತ ಈ ವೇಳೆ ತೆಗೆದುಕೊಂಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ನ್ಯಾಯಾಂಗ ತನಿಖೆ ವೇಳೆ ತನ್ನ ಅಪರಾಧವನ್ನು ಒಪ್ಪಿಕೊಂಡ ಈತನಿಗೆ ಆರು ವರ್ಷ ಒಂಬತ್ತು ತಿಂಗಳ ಮಟ್ಟಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular