HomeIndiaಸತ್ತ ಮರಿಯನ್ನು ಬದುಕಿಸಲು ಅಮ್ಮ ಆನೆಯ ಕೊನೆಯತ್ನ: ಕಣ್ಣೀರು ತರಿಸುವ ವಿಡಿಯೋ ವೈರಲ್‌

ಸತ್ತ ಮರಿಯನ್ನು ಬದುಕಿಸಲು ಅಮ್ಮ ಆನೆಯ ಕೊನೆಯತ್ನ: ಕಣ್ಣೀರು ತರಿಸುವ ವಿಡಿಯೋ ವೈರಲ್‌

ಮಗುವನ್ನು ಕಳೆದುಕೊಂಡ ತಾಯಿಯ ದುಃಖವು ದೊಡ್ಡದಾಗಿದೆ. ಇದು ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಪ್ರಾಣಿಗಳೂ ಸಹ ಅದೇ ನೋವನ್ನು ಅನುಭವಿಸುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ತಾಯಿ ಆನೆಯೊಂದು ತನ್ನ ಸತ್ತ ಮರಿಯನ್ನು ಬದುಕಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಸ್ಸಾಂನ ಗೋಧೇಶ್ವರದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಾಂತ ನಂದಾ ಹಂಚಿಕೊಂಡಿದ್ದಾರೆ.

3 ದಿನಗಳ ಹಿಂದೆ ಹಿಂಡಿನಿಂದ ದಾರಿ ತಪ್ಪಿ ಮರಿ ಆನೆ ಸಾವನ್ನಪ್ಪಿತ್ತು. ಆದರೆ ತಾಯಿ ತನ್ನ ಮರಿಯನ್ನು ಬಿಡಲಿಲ್ಲ. ಮಗುವನ್ನು 2 ಕಿ.ಮೀ ವರೆಗೆ ಹೊತ್ತೊಯ್ದು ನದಿಯ ಹೊಳೆಯಲ್ಲಿ ಇಟ್ಟು ಬದುಕಿಸಲು ಯತ್ನಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ನೋಡಿ ನೆಟ್ಟಿಗರು ಕಣ್ಣೀರು ಹಾಕುತ್ತಿದ್ದಾರೆ. ’ತಾಯಿಯ ಕೂಗು ಗಾಳಿಯಲ್ಲಿ ಮೊಳಗುತ್ತಿ‌‌ದೆ’ ಎಂದು ವೀಡಿಯೊ ಶೀರ್ಷಿಕೆಯಲ್ಲಿ ಕಂಡು ಬರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular