HomeBusinessBIG NEWS: ಗಗನಕ್ಕೇರಿದ ತರಕಾರಿ-ಸೊಪ್ಪಿನ ಬೆಲೆ; ಶತಕ ಬಾರಿಸಿದ ಬೀನ್ಸ್, ಮಾರ್ಕೆಟ್ ಗೆ ಹೋಗಿ ಬರಿಗೈಲಿ...

BIG NEWS: ಗಗನಕ್ಕೇರಿದ ತರಕಾರಿ-ಸೊಪ್ಪಿನ ಬೆಲೆ; ಶತಕ ಬಾರಿಸಿದ ಬೀನ್ಸ್, ಮಾರ್ಕೆಟ್ ಗೆ ಹೋಗಿ ಬರಿಗೈಲಿ ವಾಪಸ್ಸಾಗಬೇಕಾದ ಸ್ಥಿತಿ

ಬೆಂಗಳೂರು: ಒಂದೆಡೆ ಚಂಡಮಾರುತದ ಆರ್ಭಟ, ಇನ್ನೊಂದೆಡೆ ಮಳೆಯ ಕೊರತೆ. ಈ ನಡುವೆ ತರಕಾರಿ-ಹಣ್ಣುಗಳ ಬೆಲೆಗಳು ಗಗನಮುಖಿಯಾಗಿದ್ದು, ಬೀನ್ಸ್, ನುಗ್ಗೆಕಾಯಿ, ಸೊಪ್ಪಿನ ಬೆಲೆಗಳು ನೂರು ರೂಪಾಯಿ ದಾಟಿವೆ.

ಬೀನ್ಸ್ ಕೆಜಿಗೆ ಶತಕ ದಾಟಿದೆ. ನುಗ್ಗೇಕಾಯಿ ಬೆಲೆಯೂ 100 ರೂಪಾಯಿಯಾಗಿದೆ. 30 ರೂಪಾಯಿ ಇದ್ದ ಮೈಸೂರು ಬದನೆ 60-70 ರೂಪಾಯಿ ತಲುಪಿದೆ. ಕ್ಯಾರೆಟ್ 60 ರೂಪಾಯಿ ಆಗಿದೆ. ಈರುಳ್ಳಿ ಮಾತ್ರ ಕೈಗೆಟುಕುವಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕೊತ್ತಂಬರಿ ಸೊಪ್ಪು, ಮೆಂತ್ಯೆ, ಪಾಲಕ್ ದರವೂ ಹೆಚ್ಚಿದೆ. ಈ ವಾರ ತರಕಾರಿ ದರದಲ್ಲಿ ಭಾರಿ ಏರಿಕೆಯಾಗಿದ್ದು, ಮಾರ್ಕೆಟ್ ಗೆ ತರಕಾರು ತರಲು ಹೋದ ಮಹಿಳೆಯರು ಬೆಲೆ ನೋಡಿ ಬರಿಗೈಲಿ ವಾಪಸ್ ಆಗುವಂತಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular