ಬೆಂಗಳೂರು : ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ 2023ನೇ ಸಾಲಿನ ಕಾಮೆಡ್ ಕೆ ಫಲಿತಾಂಶವನ್ನು ಇಂದು ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಫಲಿತಾಂಶ ಪರಿಶೀಲಿಸಲು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಅಧಿಕೃತ ಪೋರ್ಟಲ್ ಗೆ ಲಾಗ್ ಇನ್ ಆಗಬಹುದು.
ವಿದ್ಯಾರ್ಥಿಗಳು comedk.org. ವೆಬ್ ಸೈಟ್ ಗೆ ಭೇಟಿ ನೀಡಿ , ‘COMEDK 2023 ರ ಯಾಂಕ್ ಕಾರ್ಡ್’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ. ಆಗ ಹೊಸ ಪುಟವು ಪರದೆಯ ಮೇಲೆ ಕಾಣಿಸುತ್ತದೆ. ನಂತರ ಕೇಳಿದ ಮಾಹಿತಿ ನಮೂದಿಸಿ ಮತ್ತು ಸಲ್ಲಿಸುವಾಗ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ COMEDK 2023 ಸ್ಕೋರ್ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ. ಫಲಿತಾಂಶ ವೀಕ್ಷಿಸಲು comedk.org ವೆಬ್ ಸೈಟ್ ವೀಕ್ಷಿಸಬಹುದಾಗಿದೆ.