HomeEntertainmentಸಾಯಿಪಲ್ಲವಿ ಮೇಲೆ ಕ್ರಶ್ ಇದೆ, ಅವರ ನಂಬರ್ ಇದ್ದರೂ ಸಂಪರ್ಕಿಸುವ ಶಕ್ತಿ ಇಲ್ಲ: ನಟ ಗುಲ್ಶನ್...

ಸಾಯಿಪಲ್ಲವಿ ಮೇಲೆ ಕ್ರಶ್ ಇದೆ, ಅವರ ನಂಬರ್ ಇದ್ದರೂ ಸಂಪರ್ಕಿಸುವ ಶಕ್ತಿ ಇಲ್ಲ: ನಟ ಗುಲ್ಶನ್ ದೇವಯ್ಯ ಹೇಳಿಕೆ

ನಟ ಗುಲ್ಶನ್ ದೇವಯ್ಯ ಅವರು ನಟಿ ಸಾಯಿ ಪಲ್ಲವಿಯನ್ನು ತಮ್ಮ ಕ್ರಶ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಅವರು ನಟಿಯ ಫೋನ್ ನಂಬರ್ ಹೊಂದಿದ್ದು ಅವರನ್ನು ಸಂಪರ್ಕಿಸುವ ಶಕ್ತಿಯಿಲ್ಲ ಎಂದಿದ್ದಾರೆ.

ಈ ಹಿಂದೆ ನಟಿ ಸಾಯಿ ಪಲ್ಲವಿಯನ್ನು ಅವರು ತಮ್ಮ ಕ್ರಶ್ ಎಂದಿದ್ದರು. ಇದೀಗ ಮತ್ತೊಂದು ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ಮೇಲೆ ನನಗೆ ಕ್ರಶ್ ಇದೆ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಯಿ ಪಲ್ಲವಿ ಬಗ್ಗೆ ಮಾತನಾಡುತ್ತಾ, “ನನಗೆ ಸಾಯಿ ಪಲ್ಲವಿ ಮೇಲೆ ದೊಡ್ಡ ಕ್ರಶ್ ಇದೆ. ಅವರ ಮೊಬೈಲ್ ಸಂಖ್ಯೆಯೂ ನನ್ನ ಬಳಿ ಇದೆ. ಆದರೆ ಅವರನ್ನು ಸಂಪರ್ಕಿಸಲು ನನಗೆ ಶಕ್ತಿ ಇಲ್ಲ. ಅವರು ಅದ್ಭುತ ನಟಿ ಮತ್ತು ನೃತ್ಯಗಾರ್ತಿ. ನನಗೆ ಇದು ಮೋಹ ಮಾತ್ರ ಎಂದು ಭಾವಿಸುತ್ತೇನೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ನಾನು ಕೆಲವೊಮ್ಮೆ ಅವರ ಬಗ್ಗೆ ಸ್ವಲ್ಪ ವ್ಯಾಮೋಹಗೊಂಡಿದ್ದೇನೆ. ನನಗೆ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕರೆ ತುಂಬಾ ಸಂತೋಷ ಪಡುತ್ತೇನೆ” ಎಂದು ಹೇಳಿದರು.

ಗುಲ್ಶನ್ ದೇವಯ್ಯ 2012 ರಲ್ಲಿ ಕಲ್ಲಿರೊಯಿ ಟ್ಜಿಯಾಫೆಟಾ ಅವರನ್ನು ವಿವಾಹವಾಗಿದ್ದರು. ಆದರೆ 2020 ರಲ್ಲಿ ಅವರಿಬ್ಬರೂ ಬೇರ್ಪಟ್ಟರು. “ನಾವು ಒಳ್ಳೆಯ ವಿಷಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ ಮತ್ತು ಯಾವುದನ್ನೂ ಹಾಳು ಮಾಡದಂತೆ ಖಚಿತಪಡಿಸಿಕೊಂಡಿದ್ದಕ್ಕಾಗಿ ನನ್ನ ಮಾಜಿ ಪತ್ನಿ ಕಲ್ಲಿರೋಯ್‌ಗೆ ನಾನು ಸಮಾನ ಕ್ರೆಡಿಟ್ ನೀಡುತ್ತೇನೆ. ನಾವು ಈ ಸಮಾಜಕ್ಕೆ ಉದಾಹರಣೆಯಾಗಬೇಕೆಂದು ಯೋಚಿಸಿರಲಿಲ್ಲ. ಅವಳು ಈಗ ನನ್ನ ಉತ್ತಮ ಸ್ನೇಹಿತೆ” ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular