HomeEntertainmentVideo | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ...

Video | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ ಉತ್ತರ

ತಮ್ಮ ಅಂಗಸೌಷ್ಠವ ಹಾಗೂ ಮ್ಯಾನರಿಸಂಗಳಿಂದ ನಾಲ್ಕು ದಶಕಗಳಿಂದಲೂ ಯುವಜನರ ಪಾಲಿನ ಹಾಟ್ ಫೇವರಿಟ್ ಆಗಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಈ ವಯಸ್ಸಿನಲ್ಲೂ ಲಲನೆಯರ ಮನಗೆಲ್ಲುವಲ್ಲಿ ಕಿರಿಯ ನಟರಿಗಿಂತಲೂ ಮುಂದಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಪ್ರಶಸ್ತಿ ಸಮಾರಂಭ 2023ರಲ್ಲಿ ಭಾಗಿಯಾಗಿರುವ ಸಲ್ಮಾನ್ ಖಾನ್‌ಗೆ ತಮ್ಮ ಹೊಸ ಗಡ್ಡಧಾರಿ ಲುಕ್‌ ಹಾಗೂ ವಿಕ್ಕಿ ಕೌಶಲ್‌ನೊಂದಿಗೆ ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಅಭಿಮಾನಿಯೊಬ್ಬರಿಂದ ಮದುವೆಯ ಪ್ರಸ್ತಾಪ ಪಡೆದ ಸಲ್ಮಾನ್ ಖಾನ್, ಇದಕ್ಕೆ ಕೊಟ್ಟ ಪ್ರತಿಕ್ರಿಯೆಯಿಂದ ಭಾರೀ ಸಂಚಲನ ಸೃಷ್ಟಿಸಿದ್ದಾರೆ.

“ನಾನು ನಿಮಗೆ ಈ ಪ್ರಶ್ನೆ ಕೇಳಲು ಹಾಲಿವುಡ್‌ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ಘಳಿಗೆಯಿಂದ ನಿಮ್ಮ ಮೇಲೆ ಮೋಹಪೀಡಿತಳಾಗಿದ್ದೇನೆ,” ಎಂದು ಮಹಿಳಾ ಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, “ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಿ ಅಲ್ಲವೇ?” ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸುವ ಆಕೆ, “ನಾನು ಸಲ್ಮಾನ್ ಖಾನ್ ಕುರಿತು ಮಾತನಾಡುತ್ತಿದ್ದೇನೆ,’ ಎಂದು, “ನೀವು ನನ್ನನ್ನು ಮದುವೆಯಾಗುವಿರಾ?” ಎಂದು ಕೇಳು‌ತ್ತಾರೆ.

“ಮದುವೆಯಾಗುವ ನನ್ನ ದಿನಗಳು ಅಂತ್ಯಗೊಂಡಿವೆ. ನೀವು ನನ್ನನ್ನು 20 ವರ್ಷಗಳ ಹಿಂದೆ ಭೇಟಿಯಾಗಬೇಕಿತ್ತು,” ಎಂದು ಸಲ್ಮಾನ್ ಖಾನ್ ಉತ್ತರ ಕೊಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಯಂಕರ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular