HomeAuto’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ.

ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರದಲ್ಲಿನ ಅನೇಕ ದೃಶ್ಯಗಳು ಈಗಲೂ ಸಹ ಮೀಮರ್‌ಗಳಿಗೆ ಆಹರವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಆಮೀರ್‌ ಖಾನ್ ಪಾತ್ರವಹಿಸಿರುವ ರಾಂಛೋ, ಸಹಪಾಠಿ ರಾಜುನ ತಂದೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಸ್ಕೂಟರ್‌ನಲ್ಲಿ ಕೊಂಡೊಯ್ಯವ ದೃಶ್ಯ ಇಂದಿಗೂ ಸಹ ಸಿನಿಪ್ರಿಯರಿಗೆ ನೆನಪಿದೆ.

ಇದೇ ದೃಶ್ಯವನ್ನು ನೆನೆಪಿಸುವಂತೆ ವೃದ್ಧರೊಬ್ಬರನ್ನು ತಮ್ಮ ನಡುವೆ ಕೂರಿಸಿಕೊಂಡ ಯುವಕರು ಸ್ಕೂಟರ್‌ನಲ್ಲಿ ತೆರಳುತ್ತಿರುವ ಘಟನೆಯೊಂದರ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

’3 ಈಡಿಯಟ್ಸ್‌’ನ ಈ ದೃಶ್ಯದ ಲೈವ್‌ ವರ್ಶನ್ ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ಶೇರ್‌ ಮಾಡಿದ ಪೋಸ್ಟ್‌ಗೆ ತಮಾಷೆಭರಿತ ಕಾಮೆಂಟ್‌ಗಳ ಸುರಿಮಳೆಯೇ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular