HomeKarnatakaBIG NEWS: ನನಗೂ ಫ್ರೀ......ನಿಮಗೂ ಫ್ರೀ...... ಎಲ್ಲರಿಗೂ ಫ್ರೀ.......ಅಂದ್ರು; ಸುಳ್ಳು ಹೇಳಿ ಜನರಿಗೆ ಟೋಪಿ ಹಾಕುವ...

BIG NEWS: ನನಗೂ ಫ್ರೀ……ನಿಮಗೂ ಫ್ರೀ…… ಎಲ್ಲರಿಗೂ ಫ್ರೀ…….ಅಂದ್ರು; ಸುಳ್ಳು ಹೇಳಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ; ಕಾಂಗ್ರೆಸ್ ಸರ್ಕಾರದ ವಿರುದ್ಧ HDK ಕಿಡಿ

ಬೆಂಗಳೂರು: ಯಾವ ಆಧಾರದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ? ಈಗ ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತರಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಳಂಬವಾಗುತ್ತಿರುವ ಬಗ್ಗೆ ವಾಗ್ದಾಳಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಚುನಾವಣೆಗೂ ಮುನ್ನ ನನಗೂ ಫ್ರೀ….., ನಿಮಗೂ ಫ್ರೀ…….ಎಲ್ಲರಿಗೂ ಫ್ರೀ……. ಅಂದ್ರು. ಸಿದ್ದರಾಮಯ್ಯನವರು ಫ್ರೀ…… ಫ್ರೀ…… ಎಂದು ಓಡಾಡಿದರು. ಈಗ ಗೈಡ್ ಲೈನ್ ಮಾಡ್ತೀವಿ ಎಂತಿರೋದ್ಯಾಕೆ ? ಎಲ್ಲರಿಗೂ ಗ್ಯಾರಂಟಿ ಕೊಡಲಿ ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ನವರು ಸುಳ್ಳು ಹೇಳಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಡ್ತೀವಿ ಎಂದು ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

Most Popular