HomeIndiaBIG NEWS: ಗೋವಾ ಪ್ರವಾಸಕ್ಕೆ ತೆರಳಿದ್ದ ಯುವಕರು ನಾಪತ್ತೆ

BIG NEWS: ಗೋವಾ ಪ್ರವಾಸಕ್ಕೆ ತೆರಳಿದ್ದ ಯುವಕರು ನಾಪತ್ತೆ

ಬೆಂಗಳೂರು: ಗೋವಾ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸ್ನೇಹಿತರ ಪೈಕಿ ಬೆಂಗಳೂರು ಮೂಲದ ಇಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಆನೇಕಲ್ ತಾಲೂಕಿನ ಚಿಕ್ಕದಾಸನಹಳ್ಳಿಯ ಸಂತೋಷ್ (33) ಹಾಗೂ ಮುನಿ ಕುಮಾರ್ (37) ನಾಪತ್ತೆಯಾದವರು.

ಮೇ 20ರಂದು ನಾಲ್ವರು ಸ್ನೇಹಿತರೊಂದಿಗೆ ಕಾರಿನಲ್ಲಿ ಗೋವಾಕ್ಕೆ ತೆರಳಿದ್ದರು. ನಾಲ್ವರು ರೆಸಾರ್ಟ್ ನಲ್ಲಿ ವಾಸವಾಗಿದ್ದರು. ಮುಂಜಾನೆ ತಿಂಡಿ ತರಲೆಂದು ಹೊರ ಹೋದ ಇಬ್ಬರು ವಾಪಸ್ ಬಂದಿಲ್ಲ. ಎಷ್ಟು ಹೊತ್ತಾದರು ಇಬ್ಬರು ಸ್ನೇಹಿತರು ರೂಮಿಗೆ ಬಾರದ ಹಿನ್ನೆಲೆಯಲ್ಲಿ ಇಬ್ಬರು ಸ್ನೇಹಿತರು ಕರೆ ಮಾಡಿದ್ದಾರೆ. ಒಮ್ಮೆ ಮಾತ್ರ ಫೋನ್ ರಿಂಗ್ ಆಗಿ ಕಟ್ ಆಗಿದೆ. ಬಳಿಕ ಇಬ್ಬರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರು ಸ್ನೇಹಿತರು ನಾಪತ್ತೆ ಹಿನ್ನೆಲೆಯಲ್ಲಿ ಗೋವಾದ ಕಾಲಂಗ್ಯೂಟ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular