ಪಾರ್ಕಿಂಗ್ ವಿಚಾರಕ್ಕೆ ಜಗಳ; ಚಪ್ಪಲಿ, ರಾಡ್ ಹಿಡಿದು ಯುವಕರ ಹೊಡೆದಾಟ 18-05-2023 9:05PM IST / No Comments / Posted In: Latest News, India, Live News ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಎರಡು ಗುಂಪು ಚಪ್ಪಲಿ, ರಾಡ್ ಹಿಡಿದು ಹೊಡೆದಾಡಿರೋ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಹೊಡೆದಾಟದಲ್ಲಿ ಕನಿಷ್ಠ 10 ಮಂದಿ ಭಾಗವಹಿಸಿದ್ದರು. ಹೊಡೆದಾಟದ ಸಂಪೂರ್ಣ ದೃಶ್ಯವನ್ನು ಸೆರೆಹಿಡಿಯಲಾಗಿದ್ದು ವೈರಲ್ ಆಗಿದೆ. ಮೊದಲು ಇಬ್ಬರು ಹುಡುಗರು ಯುವಕನ ಮೇಲೆ ದಾಳಿ ಮಾಡುತ್ತಾರೆ. ನಂತರ ಹಲವು ಮಂದಿ ಹೊಡೆದಾಟದಲ್ಲಿ ಸೇರಿಕೊಂಡು ಚಪ್ಪಲಿ, ರಾಡ್ ಹಿಡಿದು ಗಲಾಟೆ ಮಾಡಿದ್ದಾರೆ. ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಭಯ್ ಖಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪೊಲೀಸ್ ಕಮಿಷನರೇಟ್ ಗಾಜಿಯಾಬಾದ್‌ನ ಟ್ವಿಟ್ಟರ್ ಪುಟವು ಹೊಡೆದಾಟದ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಗಲಾಟೆಯಲ್ಲಿ ತೊಡಗಿದ್ದವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪತ್ರಿಕಾ ಪ್ರಕಟಣೆಯಲ್ಲಿ, ಘಟನೆಯ ವೀಡಿಯೊದಲ್ಲಿ ನೋಡಿದ ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಘಟನೆ ಮಂಗಳವಾರ, ಮೇ 16 ರಂದು ನಡೆದಿದೆ ಎಂದು ವರದಿಯಾಗಿದೆ. ಬಂಧಿತರನ್ನು 20 ವರ್ಷದ ಗುಲ್ಶನ್ ತ್ಯಾಗಿ, 19 ವರ್ಷದ ಆಶಿಶ್ ತ್ಯಾಗಿ ಮತ್ತು 20 ವರ್ಷದ ಕ್ರಿಶ್ ಸೈನಿ ಎಂದು ಗುರ್ತಿಸಲಾಗಿದೆ. ಪಾರ್ಕಿಂಗ್ ಜಾಗದ ವಿವಾದವು ವಾಗ್ವಾದಕ್ಕೆ ಕಾರಣವೆಂದು ವರದಿಯಾಗಿದೆ. #गाजियाबाद मामूली विवाद को लेकर दो गुटों में जमकर हुई मारपीट मारपीट का वीडियो सोशल मीडिया पर वायरल, *इंदिरापुरम थाना क्षेत्र के अभय खंड इलाके का मामला बताया जा रहा है वायरल वीडियो @Uppolice @ghaziabadpolice @dm_ghaziabad @myogiadityanath @UPGovt @dgpup pic.twitter.com/J59fQ2gryq — India Direct News (@IndiaDirectNew4) May 18, 2023 थाना इन्दिरापुरम पुलिस द्वारा अभयखन्ड क्षेत्र, इन्दिरापुरम में मारपीट की वायरल वीडियो से सम्बन्धित मे 03 व्यक्ति गिरफ्तार ।@Uppolice pic.twitter.com/EFpmCYcxV2 — POLICE COMMISSIONERATE GHAZIABAD (@ghaziabadpolice) May 17, 2023