HomeEntertainmentಗುಂಪಿನ ಮಧ್ಯೆ ವ್ಯಕ್ತಿಯ ಆತ್ಮವಿಶ್ವಾಸದ ಆಕರ್ಷಣೆ; ಕ್ಯೂಟ್ ಡ್ಯಾನ್ಸ್ ವಿಡಿಯೋ ವೈರಲ್

ಗುಂಪಿನ ಮಧ್ಯೆ ವ್ಯಕ್ತಿಯ ಆತ್ಮವಿಶ್ವಾಸದ ಆಕರ್ಷಣೆ; ಕ್ಯೂಟ್ ಡ್ಯಾನ್ಸ್ ವಿಡಿಯೋ ವೈರಲ್

ನೃತ್ಯವು ಸ್ವಯಂ ಅಭಿವ್ಯಕ್ತಿಯ ಒಂದು ರೂಪವಾಗಿದೆ. ಒತ್ತಡವನ್ನು ಬಿಡುಗಡೆ ಮಾಡಲು ಮತ್ತು ಹೊರಹಾಕಲು ಜನರಿಗೆ ನಿಜವಾಗಿಯೂ ಸಹಾಯ ಮಾಡುತ್ತದೆ. ಡ್ಯಾನ್ಸ್ ಮೋಜು ಮಾಡುವ ಉತ್ತಮ ಮಾರ್ಗವೂ ಹೌದು. ಇಂತಹ ಮೋಜಿನ ಕಾರ್ಯವನ್ನ ವ್ಯಕ್ತಿಯೊಬ್ಬರು ಅತ್ಯಂತ ಸಂತೋಷದಿಂದ ಮಾಡಿದ್ದಾರೆ.

ಮುಂಬೈನ ಮೆರೈನ್ ಡ್ರೈವ್‌ನಲ್ಲಿ ವ್ಯಕ್ತಿಯೊಬ್ಬರು ರೇಸ್ 2 ಚಿತ್ರದ ಲಟ್ ಲಗ್ ಗಯೀ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗುಂಪಿನ ಮಧ್ಯೆ ನಿಂತಿರುವ ವ್ಯಕ್ತಿ ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಆ ವ್ಯಕ್ತಿಯ ಹೆಸರು ಅಭಿಜಿತ್ ಶಾಹಾ. ಅವರು ವೃತ್ತಿಯಲ್ಲಿ ಸಿಎ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫ್ಲಟ್ಟರ್ ಶಟರ್ ಎಂಬ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

“ಲೈಫ್ ಮೈ ಬಾಸ್ ಇತ್ನಾ ಕಾನ್ಫಿಡೆನ್ಸ್ ಹೋನಾ ಚಾಹಿಯೇ (ಜೀವನದಲ್ಲಿ ಇಷ್ಟು ಆತ್ಮವಿಶ್ವಾಸ ಬೇಕು),” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯ ಡ್ಯಾನ್ಸ್ ಮೆಚ್ಚಿಕೊಂಡಿದ್ದು ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.

https://www.youtube.com/watch?v=GHOT5-YPlwM

For Latest News Updates, Join Our Whatsapp Community🚩
RELATED ARTICLES

Most Popular