HomeIndiaSHOCKING: ಸೋದರ ಮಾವನಿಂದಲೇ ಗರ್ಭಿಣಿ ಮೇಲೆ ಅತ್ಯಾಚಾರ

SHOCKING: ಸೋದರ ಮಾವನಿಂದಲೇ ಗರ್ಭಿಣಿ ಮೇಲೆ ಅತ್ಯಾಚಾರ

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿ 35 ವರ್ಷದ ಗರ್ಭಿಣಿ ಮೇಲೆ ಆಕೆಯ ಸಂಬಂಧಿ ಅತ್ಯಾಚಾರವೆಸಗಿದ್ದಾನೆ.

ಮೇ 4 ರಂದು ಬೆರಾಸಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗುರುವಾರ ದೂರು ದಾಖಲಾಗಿದೆ. ಮಹಿಳೆ ಮತ್ತು ಆಕೆಯ ಪತಿಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಬೀರುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

35 ವರ್ಷದ ಮಹಿಳೆ ರಾಜಸ್ಥಾನ ಮೂಲದವರು. ಮಹಿಳೆ ಎಂಟು ತಿಂಗಳ ಗರ್ಭಿಣಿ. ಆಕೆಯ ಪತಿ ಗುನಾದಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಮೇ 4ರಂದು ಮಹಿಳೆಯ ಅತ್ತಿಗೆ ಆಕೆಯನ್ನು ಬೆರಾಸಿಯಾದ ತನ್ನ ಮನೆಗೆ ಆಹ್ವಾನಿಸಿದ್ದಳು. ಅತ್ತಿಗೆ ಕೆಲವು ತುರ್ತು ಕೆಲಸದ ಕಾರಣ ಹೊರಗೆ ಹೋಗಿದ್ದು, ಮಹಿಳೆ ಒಂಟಿಯಾಗಿದ್ದಾಗ ಆರೋಪಿ ಅತ್ಯಾಚಾರ ಎಸಗಿದ್ದಾನೆ.

ಪ್ರತಿಭಟಿಸಿದರೆ ಆಕೆಯನ್ನು, ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ಮಹಿಳೆ ಗುನಾಗೆ ತೆರಳಿದ್ದಾಳೆ. ಘಟನೆ ನಡೆದ ಎರಡು ದಿನಗಳ ನಂತರ ಆಕೆ ತನ್ನ ಪತಿಗೆ ಅತ್ಯಾಚಾರದ ಬಗ್ಗೆ ವಿವರಿಸಿದ್ದಾಳೆ. ಆರೋಪಿಯನ್ನು ಪ್ರಶ್ನಿಸಲು ದಂಪತಿ ಬೆರಾಸಿಯಾ ತಲುಪಿದಾಗ ಆರೋಪಿ ಮಹಿಳೆ ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ನಂತರ ದಂಪತಿ ಪೊಲೀಸರನ್ನು ಸಂಪರ್ಕಿಸಿ ಬೆರಾಸಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಮೇಲೆ ಅತ್ಯಾಚಾರದ ಆರೋಪ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular