ಕೆಲವೊಂದು ತರಕಾರಿ ಮತ್ತು ಹಣ್ಣುಗಳನ್ನು ನಾವು ಪ್ರತಿನಿತ್ಯ ತರಬೇಕೆಂದೇನಿಲ್ಲ. ಸರಿಯಾದ ಕ್ರಮದಲ್ಲಿ ಸಂರಕ್ಷಿಸಿ ಇಟ್ಟರೆ ಅವು ಒಂದು ತಿಂಗಳವರೆಗೂ ಫ್ರೆಶ್ ಆಗಿರುತ್ತವೆ. ಅದ್ಹೇಗೆ ಅನ್ನೋದನ್ನು ನೋಡೋಣ.
ಈರುಳ್ಳಿಯನ್ನು ಒಂದು ತಿಂಗಳವರೆಗೂ ಫ್ರೆಶ್ ಆಗಿ ಇಟ್ಟುಕೊಳ್ಳಬಹುದು. ಆದ್ರೆ ಅದನ್ನು ಸರಿಯಾಗಿ ಸ್ಟೋರ್ ಮಾಡಿಟ್ಟಲ್ಲಿ ಮಾತ್ರ. ಇದಕ್ಕಾಗಿ ಸಾಕ್ಸ್ ಬಳಸುವುದು ಉತ್ತಮ. ಸಾಕ್ಸ್ ನೊಳಕ್ಕೆ ಈರುಳ್ಳಿಯನ್ನು ಹಾಕಿ, ಪ್ರತಿ ಈರುಳ್ಳಿ ಹಾಕಿದ ಮೇಲೂ ಒಂದೊಂದು ಗಂಟು ಹಾಕಿಕೊಳ್ಳಿ. ನಂತರ ಅದನ್ನು ತಂಪಾದ, ಬೆಳಕು ಇರುವ ಒಣಗಿದ ಪ್ರದೇಶದಲ್ಲಿ ಇಡಿ. ಹೀಗೆ ಮಾಡಿದ್ರೆ ಈರುಳ್ಳಿ ತನ್ನ ತೇವಾಂಶವನ್ನು ಉಳಿಸಿಕೊಳ್ಳುತ್ತದೆ, ತಿಂಗಳವರೆಗೂ ತಾಜಾ ಆಗಿರುತ್ತದೆ.
ಕೆಲವೊಮ್ಮೆ ನಮಗೆ ಅರ್ಧನಿಂಬೆ ಹಣ್ಣು, ಅರ್ಧ ಟೊಮೆಟೋ, ಅರ್ಧ ಕ್ಯಾಪ್ಸಿಕಂ ಮಾತ್ರ ಅಗತ್ಯವಿರುತ್ತದೆ. ಉಳಿದ ಅರ್ಧವನ್ನು ಸಂರಕ್ಷಿಸಿಡಲು ಫುಡ್ ಹಗ್ಗರ್ಸ್ ತಂದಿಟ್ಟುಕೊಳ್ಳಿ. ಅವು ಬೇಕಾದ ಗಾತ್ರಗಳಲ್ಲಿ ಸಿಗುತ್ತವೆ. ಫುಡ್ ಹಗ್ಗರ್ಸ್ ನಲ್ಲಿ ಅರ್ಧ ಕತ್ತರಿಸಿದ ತರಕಾರಿಗಳು ಬಹು ಸಮಯದವರೆಗೂ ಫ್ರೆಶ್ ಆಗಿರುತ್ತವೆ.
ಪ್ರತಿ ಮನೆಯಲ್ಲೂ ಕೊತ್ತಂಬರಿಸೊಪ್ಪು, ಪುದೀನಾವನ್ನು ಅಡುಗೆಯಲ್ಲಿ ಬಳಸ್ತಾರೆ. ಆದ್ರೆ ಇವು ಬಹುಬೇಗ ಬಾಡಿ ಹೋಗುತ್ತವೆ, ಇಲ್ಲವೇ ಕೊಳೆಯುತ್ತವೆ. ಗ್ಲಾಸ್ ನಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಧನಿಯಾ ಮತ್ತು ಪುದೀನಾ ಸೊಪ್ಪನ್ನು ಇಡಿ. ಮೇಲಿನಿಂದ ಪ್ಲಾಸ್ಟಿಕ್ ಕವರ್ ಮುಚ್ಚಿ ರಬ್ಬರ್ ಹಾಕಿಬಿಡಿ. ನಂತರ ಅದನ್ನು ಫ್ರೀಜರ್ ನಲ್ಲಿಟ್ಟರೆ ವಾರಗಟ್ಟಲೆ ಬಳಸಬಹುದು.
ಇನ್ನು ಸಲಾಡ್ ಅನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂರಕ್ಷಿಸಿ ಇಡಬಹುದು. ಅಥವಾ ಫ್ರೂಟ್ ಬೌಲ್ ನಲ್ಲಿ ಹಾಕಿ ಅದಕ್ಕೆ ಪ್ಲಾಸ್ಟಿಕ್ ನಿಂದ ಗಾಳಿಯಾಡದಂತೆ ಕವರ್ ಮಾಡಿದ್ರೆ ಕತ್ತರಿಸಿದ ಹಣ್ಣುಗಳು ಕೂಡ ಫ್ರೆಶ್ ಆಗಿರುತ್ತವೆ. ಆಲ್ಯೂಮಿನಿಯಂ ಫಾಯಿಲ್ ನಲ್ಲಿ ಸೊಪ್ಪನ್ನು ಹಾಕಿ ಸುತ್ತಿ ಇಟ್ಟರೆ ವಾರದವರೆಗೂ ಹಾಳಾಗದೆ ಚೆನ್ನಾಗಿರುತ್ತದೆ.