HomeKarnatakaBIG NEWS: ಪ್ರಶಾಂತ್ ಸಂಬರಗಿ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ

BIG NEWS: ಪ್ರಶಾಂತ್ ಸಂಬರಗಿ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ

ಹುಬ್ಬಳ್ಳಿ: ಪೇಮೆಂಟ್ ತೆಗೆದುಕೊಂಡು ನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಆರೋಪಕ್ಕೆ ಶಿವಣ್ಣ ಗರಂ ಆಗಿದ್ದು, ಆ ಮಾತನ್ನು ಸಂಬರಗಿ ವಾಪಸ್ ಪಡೆಯಬೇಕು ಎಂದು ಗುಡುಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸಿದ ಶಿವರಾಜ್ ಕುಮಾರ್, ಹಣ ಪಡೆದು ಪ್ರಚಾರಕ್ಕೆ ಬಂದಿದ್ದೇನೆ ಎಂಬ ಮಾತನ್ನು ವಾಪಸ್ ಪಡೆಯಬೇಕು. ಹಾಗೆ ಮಾತನಾಡುವುದು ಸರಿಯಲ್ಲ, ನನ್ನ ಬಳಿ ಹಣವಿಲ್ವಾ? ನಾನು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಹಣ ಪಡೆದು ಇಲ್ಲಿಗೆ ಬಂದಿಲ್ಲ, ಹೃದಯದಿಂದ ಬಂದಿದ್ದೇನೆ, ವ್ಯಕ್ತಿಗಾಗಿ ಬಂದಿದ್ದೇನೆ. ಯಾರನ್ನೋ ಟೀಕೆ ಮಾಡಲೂ ಬಂದಿಲ್ಲ, ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ ಎಂದು ಗರಂ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಟ್ರೋಲ್ ವಿಚಾರವಾಗಿಯೂ ಮಾತನಾಡಿದ ಶಿವರಾಜ್ ಕುಮಾರ್, ನೀವೇ ಮನಸ್ಸಿನಿಂದ ಯೋಚಿಸಿ ಟ್ರೋಲ್ ಮಾಡುವುದು ಸರಿನಾ? ಇಲ್ಲಿಗೆ ಬಂದಿರುವ ಎಲ್ಲರೂ ಟ್ರೋಲ್ ಮಾಡೋದಿಕ್ಕೆ ಬಂದಿದ್ದಾರಾ? ಸಾವಿರ ಜನ ಹೇಳುತ್ತಾರೆ ಎಂದು ಫಾಲೊ ಮಾಡೋದಲ್ಲ, ಸ್ವಲ್ಪ ಹೃದಯದಿಂದ ಯೋಚಿಸಿ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular