HomeCrimeರೈಲಿನಲ್ಲಿ ಗುಟ್ಕಾ ಸೇವಿಸಿದ ಮಹಿಳೆ; ವಿಡಿಯೋ ವೈರಲ್

ರೈಲಿನಲ್ಲಿ ಗುಟ್ಕಾ ಸೇವಿಸಿದ ಮಹಿಳೆ; ವಿಡಿಯೋ ವೈರಲ್

ಮುಂಬೈನ ಲೋಕಲ್ ರೈಲಿನ ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ಗುಟ್ಕಾ (ತಂಬಾಕು) ಸೇವಿಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ‌

ಸಹ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನವನ್ನು ಸೆಳೆದಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಧೈರ್ಯವಾಗಿ ಗುಟ್ಕಾ ಸೇವಿಸುತ್ತಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋವನ್ನ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು, ಮುಂಬೈ ಲೋಕಲ್‌ ರೈಲಿನಲ್ಲಿ ಒಬ್ಬ ವ್ಯಕ್ತಿ ಉಪದ್ರವವನ್ನು ಸೃಷ್ಟಿಸುತ್ತಿದ್ದಾನೆ, ವಿಲಕ್ಷಣ ಸನ್ನೆಗಳನ್ನು ಮಾಡುತ್ತಿದ್ದಾನೆ. ದಯವಿಟ್ಟು ಸಹಾಯ ಮಾಡಿ. ಮಹಿಳೆ ಸಹ ಗುಟ್ಕಾ ಸೇವಿಸ್ತಿದ್ದು ಅಸಂಬದ್ಧ ವಿಷಯವನ್ನು ಮಾತನಾಡುತ್ತಿದ್ದಾಳೆ ಎಂದು ಟ್ವೀಟ್ ಮಾಡಲಾಗಿದೆ.

ಸಾರ್ವಜನಿಕ ಸಾರಿಗೆಯಾದ ರೈಲಿನಲ್ಲಿ ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ನಿಷೇಧಿಸಲಾಗಿದೆ. ವಿಡಿಯೋ ಬಗ್ಗೆ ಮುಂಬೈ ಪೊಲೀಸ್ ಪ್ರತಿಕ್ರಿಯಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular