HomeKarnatakaBIG NEWS: ರಾಜಕಾರಣಿಗಳಿಂದ ಎದುರಾಳಿಗಳ ವಿಡಂಬನೆ ಸಹಜ ಎಂದ ಕಿಚ್ಚ ಸುದೀಪ್

BIG NEWS: ರಾಜಕಾರಣಿಗಳಿಂದ ಎದುರಾಳಿಗಳ ವಿಡಂಬನೆ ಸಹಜ ಎಂದ ಕಿಚ್ಚ ಸುದೀಪ್

ಬೆಂಗಳೂರು: ನಟ ಕಿಚ್ಚ ಸುದೀಪ್ ಇಂದು ಬೆಳಗಾವಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಚುನಾವಣಾ ಪ್ರಚಾರ, ರೋಡ್ ಶೋ ನಡೆಸಲಿದ್ದಾರೆ. ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಿಂದಾಗಿ ಬೇರೆ ಪಕ್ಷಗಳ ಜೊತೆಗಿನ ನನ್ನ ಸ್ನೇಹ ಸಂಬಂಧ ಹಳಸದು ಎಂದು ಹೇಳಿದ್ದಾರೆ.

ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನ್ನ ಬಗ್ಗೆ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಿಂದ ಬೇರೆ ಪಕ್ಷಗಳ ನಾಯಕರೊಂದಿಗಿನ ಸಂಬಂಧ ಹಾಳಾಗದು. ರಾಜಕಾರಣಿಗಳು ಎದುರಾಳಿಗಳ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡುವುದು ಸಹಜ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ಪರ ರೋಡ್ ಶೋ ನಡೆಸುವ ವೇಳೆ ಹೊಸ ಹೊಸ ಸಗತಿಗಳನ್ನು ಕಲಿಯುವ, ಅರಿತುಕೊಳ್ಳುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular