HomeIndia30 ಅಡಿ ಎತ್ತರದಿಂದ ಬಿದ್ದರೂ ಪೆಟ್ಟಾಗದೇ ಎದ್ದ ಬಾಲಕಿ: ವಿಡಿಯೋ ವೈರಲ್​

30 ಅಡಿ ಎತ್ತರದಿಂದ ಬಿದ್ದರೂ ಪೆಟ್ಟಾಗದೇ ಎದ್ದ ಬಾಲಕಿ: ವಿಡಿಯೋ ವೈರಲ್​

ವಾಶಿಮ್ (ಮಹಾರಾಷ್ಟ್ರ): ಪುಟ್ಟ ಬಾಲಕಿಯೊಬ್ಬಳು 30 ಅಡಿ ಎತ್ತರದಿಂದ ಬಿದ್ದು ಬದುಕುಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸಿಸಿ ಟಿವಿ ದೃಶ್ಯಾವಳಿಯನ್ನು ಏಪ್ರಿಲ್ 27 ರಂದು ಮಯೂರೇಶ್ ಗಣಪತ್ಯೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಎರಡು ಬೈಕ್‌ಗಳನ್ನು ಸಂಕೀರ್ಣದ ಹೊರಗಿನ ಫುಟ್‌ಪಾತ್‌ನಲ್ಲಿ ನಿಲ್ಲಿಸಲಾಗಿದೆ. ಕೆಲವು ಸೆಕೆಂಡುಗಳ ನಂತರ, ಚಿಕ್ಕ ಹುಡುಗಿ ಎತ್ತರದಿಂದ ಬಿದ್ದದ್ದನ್ನು ನೋಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೂ ಬೈಕ್​ಗೆ ಅಪ್ಪಳಿಸಿ ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ. ಬಿದ್ದ ತಕ್ಷಣ ಏನೂ ಆಗಿಲ್ಲ ಎನ್ನುವಂತೆ ಎದ್ದು ನಿಂತು ಬೈಕ್​ ಬಳಿ ಹೋಗಿದ್ದಾಳೆ. ಇದು ಪವಾಡದಲ್ಲಿ ಪವಾಡ ಎನ್ನುವಂತಿದೆ. ಅದೃಷ್ಟ ಚೆನ್ನಾಗಿದ್ದರೆ ಹೇಗೆಲ್ಲಾ ಬದುಕುಳಿಯಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular