
ತಮ್ಮ ಮಗಳನ್ನು ಕಂಡು ಬೊಗಳಿದ ಕಾರಣಕ್ಕೆ ಪಿಟ್‌ಬುಲ್ ನಾಯಿಯೊಂದರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ.
ನೋಮನ್ ಹಾಗೂ ಇಮ್ರಾನ್ ಹೆಸರಿನ ಈ ಇಬ್ಬರು ನಾಯಿಯ ಮೇಲೆ ನಿರ್ದಯವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಂದಾದ ನಾಯಿಯ ಮಾಲೀಕರ ಮೇಲೂ ದಾಳಿ ಮಾಡಲು ಮುಂದಾಗಿದ್ದಾರೆ ಈ ಕ್ರೂರಿಗಳು.
ಮೋತಿ ಹೆಸರಿನ ಈ ನಾಯಿಯ ಸ್ಥಿತಿ ಚಿಂತಾಜನಕವಾಗಿದೆ. ನಾಯಿಯ ದವಡೆಯಲ್ಲಿ ಮೂಳೆಗಳು ಮುರಿದಿದ್ದು, ’ನಿರ್ಭಯ್ ಪ್ರತಿಷ್ಠಾನ’ ಹೆಸರಿನ ಪ್ರಾಣಿ ದಯಾ ಸಂಘಟನೆಯೊಂದು ನಾಯಿಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದೆ.
“ಒಂದು ಪಾರ್ಟಿಗೆ ಸೇರಿದ ನಾಯಿ ಮತ್ತೊಂದು ಪಾರ್ಟಿಗೆ ಸೇರಿದವರ ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ಇದರಿಂದ ಮತ್ತೊಂದು ಪಾರ್ಟಿಯ ಮಂದಿ ನಾಯಿಯ ಮೇಲೆ ದಾಳಿ ಮಾಡಿದ್ದಾರೆ. ಪ್ರಕರಣದ ತನಿಖೆ ಜಾರಿಯಲ್ಲಿದ್ದು, ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದೇವೆ,” ಎಂದು ಘಾಜ಼ಿಯಾಬಾದ್‌ನ ಲೋನಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
थाना लोनी बॉर्डर पर दो पक्षो के मध्य विवाद की सूचना मिली कि एक पक्ष के कुत्ते द्वारा दुसरे पक्ष के 3 वर्षीय बच्ची पर हमला किया व दुसरे पक्ष ने कुत्ते पर हमला किया जिससे कुत्ता व कुत्ते को बचाने पर लड़की घायल हो गई।अभि0 पंजी0 कर 3 लोगो को गिरफ्तार कर कार्यवाही प्रचलित है~ACP लोनी pic.twitter.com/1299qlb8tD
— DCP RURAL COMMISSIONERATE GHAZIABAD (@DCPRuralGZB) April 27, 2023
उक्त प्रकरण के संबंध में थाना लोनी बॉर्डर पर अभियोग पंजीकृत कर 02 अभियुक्तों को हिरासत में लिया गया है, अन्य वैधानिक कार्यवाही प्रचलित है।
— DCP RURAL COMMISSIONERATE GHAZIABAD (@DCPRuralGZB) April 25, 2023

