HomeAgricultureರೈತರಿಗೆ ಭರ್ಜರಿ ಶುಭ ಸುದ್ದಿ: ವಿಶ್ವದಲ್ಲೇ ಮೊದಲ ಬಾರಿಗೆ ನ್ಯಾನೋ ಡಿಎಪಿ ಬಿಡುಗಡೆ: 500 ಎಂಎಲ್...

ರೈತರಿಗೆ ಭರ್ಜರಿ ಶುಭ ಸುದ್ದಿ: ವಿಶ್ವದಲ್ಲೇ ಮೊದಲ ಬಾರಿಗೆ ನ್ಯಾನೋ ಡಿಎಪಿ ಬಿಡುಗಡೆ: 500 ಎಂಎಲ್ ಗೆ ಕೇವಲ 600 ರೂ.; ಶೇ. 50 ರಷ್ಟು ಉಳಿತಾಯ

ನವದೆಹಲಿ: ರೈತರಿಗೆ ಶುಭ ಸುದ್ದಿ ಇಲ್ಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ನ್ಯಾನೋ ಡಿಎಪಿ ರಸಗೊಬ್ಬರವನ್ನು ಇಪ್ಕೋ ಕಂಪನಿ ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ವಾಣಿಜ್ಯ ಮಾರಾಟಕ್ಕೆ ಬಿಡುಗಡೆ ಮಾಡಿದ್ದಾರೆ.

500 ಎಂಎಲ್ ಪ್ರತಿ ಬಾಟಲ್ ಗೆ 600 ರೂ. ದರ ನಿಗದಿಪಡಿಸಲಾಗಿದೆ.  2021 ರಲ್ಲಿ ನ್ಯಾನೋ ಯೂರಿಯಾ ರಸಗೊಬ್ಬರ ಮಾರಾಟ ಮಾಡಿದ್ದ ಕಂಪನಿ ಮತ್ತೊಂದು ರಸಗೊಬ್ಬರ ಬಿಡುಗಡೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದುವರೆಗೆ 50 ಕೆಜಿ ಡಿಎಪಿ ರಸಗೊಬ್ಬರಕ್ಕೆ 1350 ರೂ.ಪಾವತಿಸಬೇಕಿತ್ತು. 500ಎಂಎಲ್ ನ್ಯಾನೋ ಡಿಎಪಿ ಬಾಟಲಿ 50 ಕೆಜಿ ಡಿಎಪಿ ಗೊಬ್ಬರದ ಬ್ಯಾಗ್ ಗೆ ಸಮನಾಗಿರುತ್ತದೆ. ಇದರ ದರ ಕೇವಲ 600 ರೂ. ರೈತರಿಗೆ ಶೇಕಡ 50ರಷ್ಟು ವೆಚ್ಚ ಉಳಿತಾಯವಾಗುತ್ತದೆ. ಸಾಗಣೆ ಮತ್ತು ನಿರ್ವಹಣೆ ವೆಚ್ಚವು ಕಡಿತವಾಗಲಿದೆ. ಪರಿಸರಕ್ಕೆ ಹಾನಿ ಕಡಿಮೆಯಾಗಿರುವ ಇದಕ್ಕೆ ಸಬ್ಸಿಡಿ ಇಲ್ಲ. ಇದರಿಂದಾಗಿ ಸರ್ಕಾರಕ್ಕೂ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

500 ಮಿಲಿ ಬಾಟಲಿಗೆ 600 ರೂ.ಗೆ ವಾಣಿಜ್ಯ ಮಾರಾಟಕ್ಕೆ ನ್ಯಾನೊ ಡಿಎಪಿ ಗೊಬ್ಬರವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ಸಾಂಪ್ರದಾಯಿಕ ಡಿಎಪಿಯ ಪ್ರಸ್ತುತ ಬೆಲೆಯ ಅರ್ಧಕ್ಕಿಂತ ಕಡಿಮೆ, ದ್ರಾವಕ ಡಿಎಪಿ ಬಳಕೆ, ಸಸ್ಯದ ಮೇಲೆ ಸಿಂಪಡಿಸುವ ಮೂಲಕ ಗುಣಮಟ್ಟ ಮತ್ತು ಪ್ರಮಾಣ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದು ಭೂಮಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಬಹಳಷ್ಟು ಕೊಡುಗೆ ನೀಡುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುವ ಕೋಟಿಗಟ್ಟಲೆ ಭಾರತೀಯರ ಆರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ರೈತರಿಗೆ ದ್ರವರೂಪದ ನ್ಯಾನೋ ಡಿಎಪಿ ಮತ್ತು ಯೂರಿಯಾದ ಬಳಕೆ ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular