HomeEntertainmentಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ

ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ

ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ತಮ್ಮ ತವರಿನ ಪರಂಪರೆ ಪರಿಚಯಿಸಿದ್ದಾರೆ.

ಸಹೋದರಿ, ನಟಿ ಶಮಿತಾ ಶೆಟ್ಟಿ ಮತ್ತು ಮಕ್ಕಳಾದ ವಿಯಾನ್ ಮತ್ತು ಶಮಿಶಾ ಜೊತೆಗೆ ಅವರು ಕಟೀಲು ದುರ್ಗಾಪರಮೇಶ್ವರಿ ದರ್ಶನ ಮಾಡಿದ್ದಾರೆ. ಯಕ್ಷಗಾನ ವೀಕ್ಷಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋವನ್ನು ಇನ್‌ಸ್ಟಾ ಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಮೂಲ ಮೂಲವಾದ ಮಂಗಳೂರಿಗೆ ತೆರಳಿ ನಮ್ಮ ಕುಲದೇವಿ ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದೆವು. ನನ್ನ ಮಂಗಳೂರಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನನ್ನ ಮಕ್ಕಳಿಗೆ ಪರಿಚಯಿಸುವ ಮೂಲಕ ನಾನು ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ. ಹಿನ್ನೆಲೆಗಾಗಿ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ವರಾಹ ರೂಪಂ ದೈವ ವಾ ರಿಷ್ಟಂ ಹಾಡನ್ನು ಆಯ್ಕೆ ಮಾಡಿದ್ದಾರೆ.

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಯುಗಾದಿ ಹಬ್ಬದಂದು ಶಿಲ್ಪಾ ರೆಟ್ರೋ ಸ್ಟೈಲ್ ನಲ್ಲಿರುವ ತಮ್ಮ ಪಾತ್ರದ ಫಸ್ಟ್ ಲುಕ್ ಶೇರ್ ಮಾಡಿದ್ದರು.

https://www.instagram.com/theshilpashetty/

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular