HomeCrimeಅತೀಕ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಪತ್ರಕರ್ತರಂತೆ ಪೋಸ್ ಕೊಡಲು ಹಂತಕರಿಗೆ ತರಬೇತಿ ನೀಡಿದ್ದ...

ಅತೀಕ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಪತ್ರಕರ್ತರಂತೆ ಪೋಸ್ ಕೊಡಲು ಹಂತಕರಿಗೆ ತರಬೇತಿ ನೀಡಿದ್ದ ಮೂವರ ಅರೆಸ್ಟ್

ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹಂತಕರಿಗೆ ಪತ್ರಕರ್ತರಂತೆ ಪೋಸ್ ಕೊಡಲು ತರಬೇತಿ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.‌

ಪೊಲೀಸರ ಪ್ರಕಾರ, ಕೊಲೆಗಾರರಿಗೆ ಸುದ್ದಿ ವರದಿಯ ಬಗ್ಗೆ ತರಬೇತಿ ನೀಡಲಾಗಿದೆ. ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಪೊಲೀಸರು ಮತ್ತು ಮಾಧ್ಯಮದ ಮುಂದೆ ಮೂವರು ಗುಂಡಿಕ್ಕಿ ಕೊಂದಿದ್ದರು.

ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿ ನಂತರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಲವಲೇಶ್ ತಿವಾರಿಗೆ ತರಬೇತಿ ನೀಡಿದ್ದಕ್ಕಾಗಿ ಬಂದಾ ಜಿಲ್ಲೆಯ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಯುಪಿ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂತಕರು ಅತೀಕ್ ಅನ್ನು ಒಂದು ದಿನದ ಹಿಂದೆಯೇ ಹತ್ಯೆ ಮಾಡಲು ಪ್ರಯತ್ನಿಸಿದ್ದರು, ಆದರೆ ಸಾಧ್ಯವಾಗಿರಲಿಲ್ಲ. ಲವ್ಲೇಶ್ ತಿವಾರಿ, ಅರುಣ್ ಮೌರ್ಯ ಮತ್ತು ಸನ್ನಿ ಸಿಂಗ್ ಎಂದು ಗುರುತಿಸಲಾದ ಆರೋಪಿಗಳು ಶನಿವಾರ ಅತೀಕ್ ಅಹ್ಮದ್ ಮತ್ತು ಅವರ ಸೋದರನನ್ನು ಇಡೀ ದಿನ ಪತ್ರಕರ್ತರಂತೆ ಬಿಂಬಿಸಿಕೊಂಡು ಹತ್ತಾರು ಟಿವಿ ಕ್ಯಾಮೆರಾಗಳು ಮತ್ತು ಪೊಲೀಸರ ಮುಂದೆ ಗುಂಡು ಹಾರಿಸಿ‌ ಕೊಂದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular