HomeIndiaವಾಕ್‌ ಹೋಗುತ್ತಿದ್ದ ಮಹಿಳೆ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಮತ್ತೊಂದು ಪ್ರಕರಣ; ವಿಡಿಯೋ ವೈರಲ್

ವಾಕ್‌ ಹೋಗುತ್ತಿದ್ದ ಮಹಿಳೆ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಮತ್ತೊಂದು ಪ್ರಕರಣ; ವಿಡಿಯೋ ವೈರಲ್

ಸಾಕು ನಾಯಿಯನ್ನು ವಾಕಿಂಗ್‌ ಕರೆದೊಯ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿಗೆ ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಯಿಡಾದ ಸೆಕ್ಟರ್‌-78ರಲ್ಲಿ ಈ ಘಟನೆ ಜರುಗಿದೆ.

ಸಾಕು ನಾಯಿಯನ್ನು ತಮ್ಮ ಕೈಗಳಲ್ಲಿ ತಬ್ಬಿಕೊಂಡು ಓಡಿ ಹೋಗುತ್ತಿರುವ ಈ ಮಹಿಳೆಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಮಂಗಳವಾರ ಸಂಜೆ ತನ್ನ ಸಾಕು ನಾಯಿಯನ್ನು ಸೊಸೈಟಿ ಪಾರ್ಕ್ ಬಳಿ ವಾಕಿಂಗ್‌ಗೆ ಕರೆದೊಯ್ದ ಮಹಿಳೆಗೆ ಹೀಗೆ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಸತಿ ಸೊಸೈಟಿಯ ನಿವಾಸಿಯೊಬ್ಬರು ಘಟನೆಯ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular