ಪುಣೆ: ಇನ್ನು 15 ದಿನಗಳಲ್ಲಿ ದೇಶದಲ್ಲಿ ಎರಡು ರಾಜಕೀಯ ಸ್ಪೋಟ ಸಂಭವಿಸಲಿದೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಅಜಿತ್ ಪವರ್ ನೇತೃತ್ವದ ಎನ್ಸಿಪಿ ಬಣ ಬಿಜೆಪಿಯೊಂದಿಗೆ ಸರ್ಕಾರ ರಚಿಸಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ ಹೊತ್ತಲ್ಲಿ ಸುಪ್ರಿಯ ಸುಳೆ ನೀಡಿರುವ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಮತ್ತು ದೆಹಲಿಯಲ್ಲಿ 15 ದಿನದಲ್ಲಿ ಎರಡು ರಾಜಕೀಯ ಸ್ಪೋಟ ಸಂಭವಿಸಲಿದೆ ಎಂದು ಸುಪ್ರಿಯಾ ಸುಳೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಏನೇ ಹೊಸ ಬೆಳವಣಿಗೆಯಾದರೂ ನನ್ನ ಸಹೋದರನನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಎಂದು ಮಾರ್ವಿಕ ಹೇಳಿಕೆ ನೀಡಿದ್ದಾರೆ.