HomeIndiaವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಕಿರುತೆರೆ ನಟಿ ಹಿನ್ನೆಲೆ ಏನು ಗೊತ್ತಾ ?

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಕಿರುತೆರೆ ನಟಿ ಹಿನ್ನೆಲೆ ಏನು ಗೊತ್ತಾ ?

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ನಡೆಯುತ್ತಿದ್ದ ಪ್ರಮುಖ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಟಿ ಆರತಿ ಮಿತ್ತಲ್ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.

ಮಾಡೆಲ್‌ಗಳಾಗುವ ಆಸೆಯಿಂದ ಬಂದಿರುವ ಯುವತಿಯರನ್ನು ಮತ್ತು ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಕ್ಕಾಗಿ ಆರತಿ ಮಿತ್ತಲ್ ಳನ್ನು ಬಂಧಿಸಲಾಗಿದೆ. ಗೋರೆಗಾಂವ್ ಹೋಟೆಲ್‌ನಿಂದ ಇಬ್ಬರು ಮಾಡೆಲ್‌ಗಳನ್ನು ರಕ್ಷಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರತಿ ಮಿತ್ತಲ್ ಯಾರು?

ಆರತಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಪ್ರಕಾರ, ಆರತಿ ಹಲವಾರು ದೂರದರ್ಶನ ಮತ್ತು ವೆಬ್ ಶೋಗಳಲ್ಲಿ ನಟಿಸಿದ್ದಾಳೆ. ‘ನಾ ಉಮ್ರಾ ಕಿ ಸೀಮಾ ಹೋ’ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ 100 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಆರತಿ, ಹಲವಾರು ಟಾಪ್ ಟೆಲಿವಿಷನ್ ನಟರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ತನಗೆ ದೊಡ್ಡ-ದೊಡ್ಡ ನಟರ ಪರಿಚಯವಿದೆ ಎಂದು ಫೋಸ್ ಕೊಟ್ಟಿದ್ದಾಳೆ. ಇದೀಗ ಆರತಿ ಮಿತ್ತಲ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ವರದಿಗಳ ಪ್ರಕಾರ, ಆರತಿ ನಗರದಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದಳು. ಮಾಡೆಲ್‌ಗಳನ್ನು ಸಂಪರ್ಕಿಸಿ ಅವರಿಗೆ ಕೆಲಸ ಮತ್ತು ಹಣವನ್ನು ನೀಡುವ ನೆಪದಲ್ಲಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ. ಮಾಹಿತಿ ತಿಳಿದ ಮುಂಬೈ ಪೊಲೀಸರು ತಂಡವನ್ನು ರಚಿಸಿ ಗ್ರಾಹಕರಂತೆ ಪೋಸ್ ನೀಡಿ ಇಬ್ಬರು ಹುಡುಗಿಯರನ್ನು ಗೋರೆಗಾಂವ್‌ನ ಹೋಟೆಲ್‌ಗೆ ಕಳುಹಿಸಿದ್ದರು. ಈ ವೇಳೆ ಆರತಿ ಮಿತ್ತಲ್ ಪೊಲೀಸರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular