
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಳೆದ 4 ವರ್ಷದಲ್ಲಿ ವರುಣಾದಲ್ಲಿ ಬಿಜೆಪಿ ಕೊಡುಗೆಯೇನು ? ಈಗ ಚುನಾವಣೆ ಬಂತೆಂದು ಸಿಎಂ ವರುಣಾಗೆ ಬಂದು ಸುಳ್ಳು ಭಾಷಣ ಮಾಡಿ ಹೋಗಿದ್ದಾರೆ. ಸಚಿವ ವಿ.ಸೋಮಣ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದರೆ ಅವರನ್ನು ಏಕೆ ಓಡಿಸಿದ್ರು? ನನ್ನ ವಿರುದ್ಧ ಸ್ಪರ್ಧೆ ಮಾಡಲ್ಲ ಎಂದು ಸೋಮಣ್ಣ ಹೇಳಿದ್ದರೂ ಬಿ.ಎಲ್.ಸಂತೋಷ್ ದುಡ್ಡಿರುವ ವ್ಯಕ್ತಿ ಸೋಮಣ್ಣ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಗುಡುಗಿದರು.
ವಸತಿ ಸಚಿವರಾಗಿ ಕ್ಷೇತ್ರದಲ್ಲಿ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ, ಯಾವ ಅಭಿವೃದ್ಧಿ ಮಾಡದಿದ್ದರೂ ವರುಣಾಗೆ ಬಂದು ಸ್ಪರ್ಧಿಸುತ್ತಿದ್ದಾರೆ. ಸೋಮಣ್ಣ ವರುಣಾದ ಮತದಾರನೇ ಅಲ್ಲ, ವರುಣಾ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದು ಹೇಳಿದರು.

