HomeAutoಬಹು ನಿರೀಕ್ಷಿತ ಕಿಯಾ ಇವಿ-6 ಬುಕ್ಕಿಂಗ್​ ಪ್ರಾರಂಭ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಬಹು ನಿರೀಕ್ಷಿತ ಕಿಯಾ ಇವಿ-6 ಬುಕ್ಕಿಂಗ್​ ಪ್ರಾರಂಭ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನವದೆಹಲಿ: ಕಿಯಾ ಇಂಡಿಯಾ, ಭಾರತದಲ್ಲಿ 2023 Kia EV6 ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ. 30 ದಿನಗಳಲ್ಲಿ 95 ಪ್ರತಿಶತ ಮರುಖರೀದಿ ನೀತಿ, 5 ವರ್ಷಗಳವರೆಗೆ ಉಚಿತ ಆವರ್ತಕ ನಿರ್ವಹಣೆ ಮತ್ತು ಬ್ಯಾಟರಿಯ ಮೇಲೆ 8 ವರ್ಷಗಳು/ 160000 ಕಿ.ಮೀ ವಾರೆಂಟಿಯ ಜೊತೆಗೆ ಇದು ಲಭ್ಯವಿದೆ.

ಸದ್ಯ Kia EV6 ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ GT ಲೈನ್ ಮತ್ತು GT ಲೈನ್ AWD. ಇವು ಕ್ರಮವಾಗಿ 60.95 ಲಕ್ಷ ಮತ್ತು 65.95 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಜೂನ್ 2022 ರಲ್ಲಿ ಬಿಡುಗಡೆ ಮಾಡಿತ್ತು. ಅಂದಹಾಗೆ, Kia EV6 ಐದು ಬಣ್ಣಗಳಲ್ಲಿ ಲಭ್ಯವಿದೆ – ರನ್ವೇ ರೆಡ್, ಯಾಚ್ಟ್ ಬ್ಲೂ, ಮೂನ್ಸ್ಕೇಪ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ಸ್ನೋ ವೈಟ್ ಪರ್ಲ್. ಕಂಪೆನಿಯು ತನ್ನ EV ಡೀಲರ್‌ಶಿಪ್ ಫುಟ್‌ಪ್ರಿಂಟ್ ಅನ್ನು 44 ನಗರಗಳಲ್ಲಿ 60 ಔಟ್‌ಲೆಟ್‌ಗಳೊಂದಿಗೆ ವಿಸ್ತರಿಸಲು ಯೋಜಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular