HomeBusinessನಕಲಿ ಔಷಧ ಉತ್ಪಾದಿಸಿದ 18 ಫಾರ್ಮಾ ಸಂಸ್ಥೆಗಳಿಗೆ ಶಾಕ್: ಪರವಾನಿಗೆ ಕ್ಯಾನ್ಸಲ್

ನಕಲಿ ಔಷಧ ಉತ್ಪಾದಿಸಿದ 18 ಫಾರ್ಮಾ ಸಂಸ್ಥೆಗಳಿಗೆ ಶಾಕ್: ಪರವಾನಿಗೆ ಕ್ಯಾನ್ಸಲ್

ನವದೆಹಲಿ: ನಕಲಿ ಔಷಧಗಳನ್ನು ಉತ್ಪಾದಿಸಿದ 18 ಔಷಧ ಸಂಸ್ಥೆಗಳ ಪರವಾನಗಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಗುರುವಾರ ರದ್ದುಗೊಳಿಸಿದೆ.

ಗುರುವಾರ 20 ರಾಜ್ಯಗಳ 76 ಉದ್ಯಮಗಳನ್ನು ಡಿಜಿಸಿಎ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕಂಪನಿಗಳಲ್ಲಿ ಹೆಚ್ಚಿನವು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಸೇರಿವೆ. ಮಧ್ಯಪ್ರದೇಶದ ಎರಡು ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರದ ತಲಾ ಒಂದು ಕಂಪನಿಗಳಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರಾಖಂಡ ಮೂಲದ ಸಂಸ್ಥೆಗಳಾದ ಹಿಮಾಲಯ ಮೆಡಿಟೆಕ್, ಮ್ಯಾಸ್ಕಾಟ್ ಹೆಲ್ತ್ ಸೀರೀಸ್ ಮತ್ತು ಪ್ಯೂರ್ ಅಂಡ್ ಕ್ಯೂರ್ ಹೆಲ್ತ್‌ಕೇರ್ ಸಂಸ್ಥೆಗಳ ಪರವಾನಗಿಯನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಫಾರ್ಮಾಟೆಕ್ ಮತ್ತು ಮೆಡಿಪೋಲ್ ಫಾರ್ಮಾಸ್ಯುಟಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೋಕಾಸ್ ಮತ್ತು ಸ್ಟಾಪ್ ಮ್ಯಾನುಫ್ಯಾಕ್ಚರಿಂಗ್ ನೋಟಿಸ್‌ಗಳನ್ನು ಸ್ವೀಕರಿಸಿದೆ, ಆದರೆ ಅನುಸರಣೆಯನ್ನು ಪರಿಶೀಲಿಸಿದ ನಂತರ ಆದೇಶವನ್ನು ಹಿಂಪಡೆಯಲಾಗಿದೆ.

20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 76 ಫಾರ್ಮಾ ಕಂಪನಿಗಳನ್ನು ಪರಿಶೀಲಿಸಲಾಗಿದೆ. ಪರಿಶೀಲನೆಗಾಗಿ ಸುಮಾರು 203 ಸಂಸ್ಥೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ, ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸಿದ ಮತ್ತು ಉತ್ತಮ ಉತ್ಪಾದನಾ ಅಭ್ಯಾಸಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ 76 ಕಂಪನಿಗಳಿಗೆ 15 ದಿನಗಳಲ್ಲಿ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular