HomeInternationalಮಗನ ಸ್ನೇಹಿತನ ಮೇಲೆ 39 ವರ್ಷ ವಯಸ್ಸಿನ ಮಹಿಳೆಗೆ ಪ್ರೀತಿ; ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆ

ಮಗನ ಸ್ನೇಹಿತನ ಮೇಲೆ 39 ವರ್ಷ ವಯಸ್ಸಿನ ಮಹಿಳೆಗೆ ಪ್ರೀತಿ; ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆ

ತನ್ನದೇ ಮಗನ 23 ವರ್ಷದ ಸ್ನೇಹಿತನ ಮೇಲೆ ಕ್ರಶ್ ಆಗಿದ್ದ ವಿಷಯವನ್ನು ಹೇಳಿಕೊಂಡ ತಾಯಿಯೊಬ್ಬಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಜೀವನದ ಈ ಘಟ್ಟದಲ್ಲಿ ತನಗೆ ರೊಮ್ಯಾಂಟಿಕ್ ಸಂಬಂಧ ಬೇಕಿದ್ದು, ಅದು ಸುದೀರ್ಘ ಕಾಲೀನದ್ದಾಗಿರಬಾರದು ಎಂದು ಈಕೆ ಹೇಳಿಕೊಂಡಿದ್ದಾಳೆ.

ಹೀಗೆ ಮಾಡುವುದರಿಂದ ತನ್ನ ಮಗನಿಗೆ ನೋವಾಗಬಹುದು ಎಂದು ತಿಳಿದಿದ್ದರೂ ಸಹ ಈಕೆಯ ಆ ಹುಡುಗನ ಮೇಲಿರುವ ಭಾವನೆಗಳನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನನಗೆ ಆತನೊಂದಿಗೆ ಬೆರೆಯಲು ಇಷ್ಟವಿಲ್ಲ. ಏಕೆಂದರೆ ಇದು ನನ್ನ ಮಗನ ಭಾವನೆಗಳನ್ನು ನೋಯಿಸುತ್ತದೆ. ಆತನ ವಯಸ್ಸಿನ ಇತರರಿಗೆ ಈ ವಿಚಾರ ಗೊತ್ತಾದರೆ ಜೋಕ್‌ಗಳನ್ನು ಮಾಡುತ್ತಾ ಆತನ ಗೆಳೆಯರು 24 ಗಂಟೆಯೂ ಆಡಿಕೊಳ್ಳುತ್ತಾರೆ ಎಂದು ನನಗೆ ಅನಿಸುತ್ತದೆ. ಆದರೆ ಈತ ನೋಡಲು ಚೆನ್ನಾಗಿದ್ದು, ಆತನಲ್ಲಿ ಬಹಳಷ್ಟು ಭಾವನಾತ್ಮಕ ಬುದ್ಧಿವಂತಿಕೆ ಇದೆ. ಆತನೊಂದಿಗೆ ಮಾತನಾಡುವುದನ್ನು ಎಂಜಾಯ್ ಮಾಡುತ್ತೇನೆ. 19 ವರ್ಷದವನಿದ್ದಾಗಿಂದಲೂ ಆತನಿಗೆ ನಾನು ಬೇಕೆನಿಸಿದ್ದೇನೆ, ಆತನಿಗೆ ಈಗ 23,” ಎಂದು ಈಕೆ ಹೇಳಿಕೊಂಡಿದ್ದಾಳೆ.

“ನಿನ್ನ ವಯಸ್ಸಿನ ಪುರುಷನನ್ನು ನೋಡಿಕೋ ಎಂದು ಜನರು ಹೇಳುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ ನಾನು ಸುದೀರ್ಘ ಕಾಲೀನ ಸಂಬಂಧದ ಹುಡುಕಾಟದಲ್ಲಿಲ್ಲ. ಸೂಕ್ತ ವ್ಯಕ್ತಿಯನ್ನು ಕಂಡುಕೊಂಡರೆ ನನಗೆ ಸಂತಸವಾಗುತ್ತದೆ. ನನಗೊಬ್ಬ ಮಗನಿದ್ದಾನೆ ಎಂದರೆ ಷರತ್ತುಬದ್ಧ ಪ್ರೀತಿ ಇದ್ದು, ಜೊತೆಗೊಬ್ಬ ಸಂಗಾತಿ ಇದ್ದರೆ ಅದು ಬೋನಸ್ ಇದ್ದಂತೆ,” ಎಂದು ಈಕೆ ಹೇಳಿಕೊಂಡಿದ್ದಾಳೆ.

“ನೀವು ಈ ವಿಚಾರವನ್ನು ಗುಟ್ಟಾಗಿ ಇಟ್ಟರೆ, ನಿಮ್ಮ ಮಗನಿಗೆ ಗೊತ್ತಾಗದಂತೆ ನೋಡಿಕೊಳ್ಳಬಹುದು. ಆದರೆ ಎಷ್ಟು ದಿನ ಹೀಗೆ ಮಾಡಲು ಸಾಧ್ಯ?” ಎಂದು ಬುದ್ಧಿವಾದ ಹೇಳುವ ಅನೇಕ ಕಾಮೆಂಟ್‌ಗಳು ಈ ಪೋಸ್ಟ್‌ಗೆ ಬಂದಿವೆ.

For Latest News Updates, Join Our Whatsapp Community🚩
RELATED ARTICLES

Most Popular