HomeKarnatakaಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ವ್ಯಕ್ತಿ; ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ...

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ವ್ಯಕ್ತಿ; ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ ರೂ. ಬಹುಮಾನ

ಬೆಂಗಳೂರು: ಬೆಂಗಳೂರಿನ ಅರುಣ್ ಕುಮಾರ್ ಕೋರೋತ್ ಎಂಬುವರು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಅವರಿಗೆ ಅಬುಧಾಬಿಯ ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಅರುಣ್ ಕುಮಾರ್ ಅವರಿಗೆ ಲಾಟರಿಯಲ್ಲಿ ಬಹುಮಾನ ಬಂದ ಬಗ್ಗೆ ತಿಳಿಸಲು ಬಿಗ್ ಟಿಕೆಟ್ ಲಾಟರಿ ಡ್ರಾ ಸ್ಪರ್ಧೆಯ ನಿರೂಪಕರು ಕರೆ ಮಾಡಿದ್ದಾರೆ. ಆದರೆ ಅವರು ಸೈಬರ್ ವಂಚಕರ ಕರೆ ಇದಾಗಿರಬಹುದು ಎಂದು ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಬಳಿಕ ಬಿಗ್ ಟಿಕೇಟ್ ಪ್ರತಿನಿಧಿಗಳು ಕರೆ ಮಾಡಿ ಬಹುಮಾನ ಬಂದ ವಿಚಾರ ತಿಳಿಸಿದ್ದಾರೆ. ಮೊದಲಿಗೆ ಇದನ್ನು ನಂಬದ ಅರುಣ್ ಕುಮಾರ್ ತಮಾಷೆಗೆ ಮಾಡಿರುವ ಕರೆ ಎಂದು ಭಾವಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರುಣ್ ಕುಮಾರ್ ಮಾರ್ಚ್ 22 ರಂದು ಆನ್ಲೈನ್ ನಲ್ಲಿ ಬಿಗ್ ಟಿಕೆಟ್ ಲಾಟರಿ ಟಿಕೆಟ್ ಖರೀದಿಸಿದ್ದರು. ಎರಡು ಟಿಕೆಟ್ ಖರೀದಿಸಿದರೆ ಒಂದು ಉಚಿತ ಆಯ್ಕೆ ಮೂಲಕ ಅವರು ಮೂರು ಟಿಕೆಟ್ ತೆಗೆದುಕೊಂಡಿದ್ದು, ಮೂರನೇ ಟಿಕೆಟ್ ಗೆ 44.61 ಕೋಟಿ ರೂಪಾಯಿಗೆ ಬಂಪರ್ ಬಹುಮಾನ ಬಂದಿದೆ. ನಾನು ಬಹುಮಾನ ಬಂದಿದೆ ಎಂದಾಗ ನಂಬಲಿಲ್ಲ ಅನುಮಾನದಲ್ಲಿ ಇದ್ದೇನೆ. ಲಾಟರಿಯಲ್ಲಿ ಬಂದ ಹಣದಲ್ಲಿ ವ್ಯಾಪಾರ ಆರಂಭಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇದೇ ಲಾಟರಿಯ 2ನೇ ಬಹುಮಾನ ಬಹರೇನ್ ನಲ್ಲಿ ನೆಲೆಸಿರುವ ಸುರೇಶ್ ಮಥನ್ ಎಂಬುವರಿಗೆ 22.30 ಲಕ್ಷ ರೂಪಾಯಿ ಬಹುಮಾನ ಬಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular