ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ.
ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ ಬ್ರಿಟನ್ ರಾಯಭಾರಿಯೊಬ್ಬರು ತಾವು ಭಾರತೀಯ ಖಾದ್ಯವೊಂದನ್ನು ತಯಾರಿಸಿದ ವಿಚಾರವನ್ನು ಹಂಚಿಕೊಂಡಿದ್ದಾರೆ.
“ಕಳೆದ ರಾತ್ರಿ ನನ್ನ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಅಡುಗೆ ಮನೆಗೆ ಹೋಗಬೇಕಾಯಿತು. ಹೈದರಾಬಾದ್‌ನಲ್ಲಿ ನನ್ನ ಐದು ವರ್ಷಗಳ ವಾಸ್ತವ್ಯದ ವೇಳೆ ನಾನು ಕಲಿತ ಭಾರತೀಯ ಖಾದ್ಯವೊಂದರ ಬ್ರಿಟಿಷ್ ಅವತಾರವನ್ನು ಅವರಿಗೆ ಉಣಬಡಿಸಿದೆ,” ಎಂದು ಡಾ. ಆಂಡ್ರ‍್ಯೂ ಫ್ಲೆಮಿಂಗ್ ಖಾದ್ಯದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ತಂದೆಯ ಆರೈಕೆ ಮಾಡಿದ ಡಾ. ಆಂಡ್ರ‍್ಯೂ ಫ್ಲೆಮಿಂಗ್ ಬಗ್ಗೆ ನೆಟ್ಟಿಗರು ಶ್ಲಾಘನೆಯ ಕಾಮೆಂಟ್‌ಗಳನ್ನು ಹರಿಸಿದ್ದಾರೆ.
As my last post hinted my father has been unwell so Iast night I had to venture into the kitchen. And what better than for someone with a lingering chest infection than a nice 🇬🇧 interpretation of 🇮🇳 cuisine with a few secret add-ons I learnt about during 5 years in #Hyderabad? pic.twitter.com/dlxUvisRok
— Dr Andrew Fleming 🇬🇧 🏴 (@Andrew007Uk) April 3, 2023

