
ತಮ್ಮಿಬ್ಬರ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು ಎಂದು ನೀಲಿ ಚಿತ್ರ ತಾರೆಗೆ ಹಣ ಸಂದಾಯ ಮಾಡಿದ ಆರೋಪವನ್ನು ಡೊನಾಲ್ಡ್ ಟ್ರಂಪ್ ಎದುರಿಸುತ್ತಿದ್ದಾರೆ. ಹೀಗಾಗಿ ಮ್ಯಾನ್ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ 76 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಶರಣಾಗತರಾಗಿದ್ದರು.
ಬಳಿಕ ಅವರನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ಡೊನಾಲ್ಡ್ ಟ್ರಂಪ್ ಅವರ ಬೆರಳಚ್ಚು ಮಾದರಿ ಪಡೆಯುವುದರ ಜೊತೆಗೆ ಅವರ ಎಲ್ಲ ವೈಯಕ್ತಿಕ ವಿವರಗಳನ್ನು ದಾಖಲು ಮಾಡಿಕೊಂಡಿದ್ದಾರೆ.

