HomeCrimeಮಹಿಳೆ ಮೊಬೈಲ್ ಫೋನ್ ಕಸಿದು ನೀಲಿ ಚಿತ್ರ ಅಪ್ಲೋಡ್‌ ಮಾಡಿದ ವ್ಯಕ್ತಿ...!

ಮಹಿಳೆ ಮೊಬೈಲ್ ಫೋನ್ ಕಸಿದು ನೀಲಿ ಚಿತ್ರ ಅಪ್ಲೋಡ್‌ ಮಾಡಿದ ವ್ಯಕ್ತಿ…!

ಅಪರಿಚಿತ ವ್ಯಕ್ತಿಯೊಬ್ಬ, ಮಹಿಳೆಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಅದರಿಂದ ಮಹಿಳೆಯ ವಾಟ್ಸಪ್ ಸ್ಟೇಟಸ್ ನಲ್ಲಿ ಆಕ್ಷೇಪಾರ್ಹ ವಿಡಿಯೋವನ್ನ ಪೋಸ್ಟ್ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

ಸೋಮವಾರ ರಾತ್ರಿ 7.30 ರ ಸುಮಾರಿಗೆ ನಕ್ಷತ್ರವಾಡಿಯ ಕಾಂಚನ್ ನಗರ ಪ್ರದೇಶದ ಸತಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಹಿಳೆ ಹಿಟ್ಟಿನ ಗಿರಣಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ಮರುದಿನ ಕಳ್ಳ, ಮಹಿಳೆಯ ವಾಟ್ಸಾಪ್‌ ಸ್ಟೇಟಸ್ ನಲ್ಲಿ ಅಶ್ಲೀಲ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಕುಟುಂಬಸ್ಥರು ಮಹಿಳೆಯನ್ನು ಎಚ್ಚರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67 ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular