HomeKarnatakaನಟಿ ಜೊತೆಗೆ ನಾಗಚೈತನ್ಯ ಡೇಟಿಂಗ್ ವದಂತಿಗೆ ಪ್ರತಿಕ್ರಿಯೆ; ಸಮಂತಾ ಕೊಟ್ಟ ಸ್ಪಷ್ಟನೆ ಏನು ಗೊತ್ತಾ....?

ನಟಿ ಜೊತೆಗೆ ನಾಗಚೈತನ್ಯ ಡೇಟಿಂಗ್ ವದಂತಿಗೆ ಪ್ರತಿಕ್ರಿಯೆ; ಸಮಂತಾ ಕೊಟ್ಟ ಸ್ಪಷ್ಟನೆ ಏನು ಗೊತ್ತಾ….?

ನಟ ನಾಗಚೈತನ್ಯ, ನಟಿ ಶೋಭಿತಾ ಧೂಳಿಪಾಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆಂಬ ಮಾತನ್ನ ನಟಿ ಸಮಂತಾ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ.

ದಿ ಸಿಯಾಸತ್ ಡೈಲಿ ವರದಿಗೆ ಪ್ರತಿಕ್ರಿಯಿಸಿದ ನಟಿ ನಾನು ಅಂತಹ ಯಾವುದೇ ಕಾಮೆಂಟ್ ಮಾಡಿಲ್ಲ ಎಂದು ಸಮಂತಾ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆ ಎಂದು ಹೇಳಲಾಗಿದ್ದ ವರದಿಯನ್ನು ಹಂಚಿಕೊಂಡ ಸಮಂತಾ ಟ್ವೀಟ್ ಮಾಡಿದ್ದು: “ನಾನು ಇದನ್ನು ಎಂದಿಗೂ ಹೇಳಲಿಲ್ಲ.” ಎಂದಿದ್ದಾರೆ.

ಸುದ್ದಿ ವರದಿಯ ಪ್ರಕಾರ ನಾಗಚೈತನ್ಯ ಶೋಭಿತಾ ಧೂಳಿಪಾಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ವದಂತಿ ಬಗ್ಗೆ ಸಮಂತಾ ರುತ್ ಪ್ರಭು ಖಾರವಾಗಿ ಪ್ರತಿಕ್ರಿಯಿಸಿ, “ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರನ್ನು ಭೇಟಿಯಾಗಿದ್ದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವನು ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು.” ಎಂದು ಹೇಳಿದ್ದರು ಎಂದು ವರದಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಂಡನ್‌ನ ರೆಸ್ಟೋರೆಂಟ್‌ನಲ್ಲಿ ಇಬ್ಬರ ಫೋಟೋಗಳು ವೈರಲ್ ಆದ ನಂತರ ಕಳೆದ ಕೆಲವು ದಿನಗಳಿಂದ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡೇಟಿಂಗ್ ವದಂತಿಗಳು ಹೆಚ್ಚು ಸುದ್ದಿಯಾಗುತ್ತಿವೆ.

https://twitter.com/Samanthaprabhu2/status/1643135242025283585?ref_src=twsrc%5Etfw%7Ctwcamp%5Etweetembed%7Ctwterm%5E1643135242025283585%7Ctwgr%5E4ad5f0b72840ba3bb247f52ec8a7a3a4078796f0%7Ctwcon%5Es1_&ref_url=https%3A%2F%2Fwww.ndtv.com%2Fentertainment%2Fno-samantha-ruth-prabhu-did-not-react-to-naga-chaitanya-sobhita-dhulipala-dating-rumours-3918677

For Latest News Updates, Join Our Whatsapp Community🚩
RELATED ARTICLES

Most Popular