alex Certify ರೂಮರ್ ಗಳ ಮಧ್ಯೆ ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಭೇಟಿ ನೀಡಿದ ಜಾನ್ವಿ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಮರ್ ಗಳ ಮಧ್ಯೆ ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಭೇಟಿ ನೀಡಿದ ಜಾನ್ವಿ ಕಪೂರ್

ಡೇಟಿಂಗ್ ವದಂತಿಗಳ ನಡುವೆ ನಟಿ ಜಾನ್ವಿ ಕಪೂರ್ , ಶಿಖರ್ ಪಹಾರಿಯಾ ಅವರೊಂದಿಗೆ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜಾನ್ವಿ ಕಪೂರ್ ಸೋಮವಾರ ಮುಂಜಾನೆ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು ಫೋಟೋಗಳು ವೈರಲ್ ಆಗಿವೆ.

ದೇಗುಲ ಭೇಟಿ ವೇಳೆ ಶಿಖರ್ ಪಹಾರಿಯಾ ಮತ್ತು ಸಹೋದರಿ ಖುಷಿ ಕಪೂರ್ ಜೊತೆಗಿದ್ದರು. ತಮ್ಮ ನಡುವಿನ ಸಂಬಂಧದ ಬಗ್ಗೆ ಇದುವರೆಗೂ ಜಾನ್ವಿಯಾಗಲೀ ಅಥವಾ ಶಿಖರ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದಾಗ್ಯೂ ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಶಿಖರ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಶಿಖರ್ ಅವರು ವಾಣಿಜ್ಯೋದ್ಯಮಿ, ಪೋಲೋ ಆಟಗಾರ ಮತ್ತು ಸಮಾಜ ಸೇವಕ. ಇಬ್ಬರೂ ದೂರವಾಗುವ ಮೊದಲು ಶಿಖರ್ ಜಾಹ್ನವಿಯೊಂದಿಗೆ ಹಲವಾರು ವರ್ಷಗಳ ಹಿಂದೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.

ಕಾಫಿ ವಿತ್ ಕರಣ್ 7 ನಲ್ಲಿ ಕರಣ್ ಜೋಹರ್ ಡೇಟಿಂಗ್ ಬಗ್ಗೆ ಮಾತನಾಡುತ್ತಿದ್ದ ವೇಳೆ ಜಾನ್ವಿ ಕಪೂರ್, ಶಿಖರ್ ಅವರೊಂದಿಗಿನ ಸಂಬಂಧದ ಬಗ್ಗೆ ಬಹುತೇಕ ಖಚಿತಪಡಿಸಿದ್ದರು.

q9s0j5ho
ego3bbvg

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...