
ಬಾಗಲಕೋಟೆಯ ಹೆರಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನನ್ನನ್ನು ಸಮಸ್ಯೆಗೆ ಸಿಲುಕಿಸಲು ಯತ್ನಿಸುವವರನ್ನು ಈ ಬಾರಿ ಜನರೇ ಫುಟ್ ಬಾಲ್ ನಂತೆ ಆಡಿ ಮತದಾರರು ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ -KRPP ಅನಿವಾರ್ಯವಾಗಲಿದೆ. ನನ್ನ ಬಿಟ್ಟು ಸರ್ಕಾರ ಮಾಡುವಂತ ಸ್ಥಿತಿಯಲ್ಲಿ ಯಾರೂ ಇಲ್ಲ. ಖಂಡಿತವಾಗಿಯೂ ಇತರೆ ಪಕ್ಷಗಳಿಗೆ ನಾನು ಅನಿವಾರ್ಯವಾಗುತ್ತೇನೆ. ರಾಜ್ಯದಲ್ಲಿ 50 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ 30-35 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡುತ್ತೇನೆ ಎಂದರು.

