HomeKarnatakaಕೆಪಿಸಿಸಿ ಕಛೇರಿ ಮುಂದೆ ಹೈಡ್ರಾಮಾ; ಗೋಪಿಕೃಷ್ಣಗೆ ಟಿಕೆಟ್ ನೀಡದಿದ್ದರೆ ವಿಷ ಕುಡಿಯುವುದಾಗಿ ಬೆದರಿಸಿದ 'ಕೈ' ಕಾರ್ಯಕರ್ತ

ಕೆಪಿಸಿಸಿ ಕಛೇರಿ ಮುಂದೆ ಹೈಡ್ರಾಮಾ; ಗೋಪಿಕೃಷ್ಣಗೆ ಟಿಕೆಟ್ ನೀಡದಿದ್ದರೆ ವಿಷ ಕುಡಿಯುವುದಾಗಿ ಬೆದರಿಸಿದ ‘ಕೈ’ ಕಾರ್ಯಕರ್ತ

ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಮೂರೂ ಪಕ್ಷಗಳಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಇದರ ಮಧ್ಯೆ ಒಬ್ಬರೇ ಆಕಾಂಕ್ಷಿಗಳಿದ್ದ ಕ್ಷೇತ್ರಗಳಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ.

ಕಾಂಗ್ರೆಸ್ ಎರಡನೇ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ ಎನ್ನಲಾಗಿದ್ದು, ತಮಗೆ ಟಿಕೆಟ್ ಸಿಗುವುದರ ಕುರಿತು ಅನುಮಾನ ಹೊಂದಿರುವ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ಕೆಪಿಸಿಸಿ ಕಚೇರಿ ಮುಂದೆ ಇಂದು ಹೈಡ್ರಾಮವೇ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಕ್ಷೇತ್ರದ ಟಿಕೆಟ್ ಅನ್ನು ಮಡಿವಾಳ ಸಮಾಜದ ಹೆಚ್.ಎಂ. ಗೋಪಿಕೃಷ್ಣ ಅವರಿಗೆ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗನೊಬ್ಬ ವಿಷ ಸೇವಿಸಲು ಮುಂದಾಗಿದ್ದಾನೆ. ನಂತರ ಪೊಲೀಸರು ವಿಷದ ಬಾಟಲ್ ಕಸಿದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular