ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕಿ ಒಬ್ಬರು ನಾಲ್ಕು ಅಂತಸ್ತಿನ ಮನೆ ಕೊಟ್ಟಿದ್ದಾರೆ.
52 ವರ್ಷ ವಯಸ್ಸಾಗಿದ್ದರೂ ನನಗೆ ಸ್ವಂತ ಮನೆ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೇ, ಇತ್ತೀಚೆಗೆ ಲೋಕಸಭೆ ಸದಸ್ಯತ್ವ ರದ್ದಾಗಿದ್ದರಿಂದ ಅವರು ವಾಸವಿದ್ದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಇದಾದ ನಂತರ ದೆಹಲಿ ಕಾಂಗ್ರೆಸ್ ಸೇವಾದಳ ಅಧ್ಯಕ್ಷೆ ರಾಜಕುಮಾರಿ ಗುಪ್ತಾ ತಮ್ಮ ನಾಲ್ಕು ಮಹಡಿಯ ಮನೆಗೆ ರಾಹುಲ್ ಗಾಂಧಿ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಮಂಗೋಲ್ಪುರಿ ಪ್ರದೇಶದಲ್ಲಿರುವ ತಮ್ಮ ಮನೆಯನ್ನು ರಾಹುಲ್ ಗಾಂಧಿಯವರಿಗೆ ವರ್ಗಾವಣೆ ಮಾಡಿದ್ದಾರೆ.