HomeKarnatakaBIG NEWS: ಶ್ರೀರಾಮುಲು ಭಾಷಣ ಮಾಡಿದ್ದೇ ಮಾಡಿದ್ದು, ಬಿಜೆಪಿ ಡೋಂಗಿಗಳಿಂದ ಮೋಸ; ಮೀಸಲಾತಿ ಹೆಸರಲ್ಲಿ ಮಕ್ಮಲ್...

BIG NEWS: ಶ್ರೀರಾಮುಲು ಭಾಷಣ ಮಾಡಿದ್ದೇ ಮಾಡಿದ್ದು, ಬಿಜೆಪಿ ಡೋಂಗಿಗಳಿಂದ ಮೋಸ; ಮೀಸಲಾತಿ ಹೆಸರಲ್ಲಿ ಮಕ್ಮಲ್ ಟೋಪಿ; ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಸಚಿವ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರೀರಾಮುಲು ಓರ್ವ ಪೆದ್ದ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶ್ರೀರಾಮುಲು ಬರಿ ಭಾಷಣ ಮಾಡಿದ್ದೇ ಮಾಡಿದ್ದು, ಬಿಜೆಪಿ ಡೋಂಗಿಗಳು ಪರಿಶಿಷ್ಟ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ. ಮೀಸಲಾತಿ ಹೆಸರಲ್ಲಿ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಗುಡುಗಿದರು.

ಮುಸ್ಲಿಂರ ಮೀಸಲಾತಿ ಕಿತ್ತು ಲಿಂಗಾಯಿತ ಸಮುದಾಯಕ್ಕೆ, ಒಕ್ಕಲಿಗ ಸಮುದಾಯಕ್ಕೆ ಕೊಟ್ಟದ್ದು ನ್ಯಾಯವೇ? ಲಿಂಗಾಯಿತರಿಗೆ, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿದ್ದು ತಪ್ಪಲ್ಲ, ಆದರೆ ಮುಸ್ಲಿಂರ ಮೀಸಲಾತಿಯನ್ನೇ ರದ್ದು ಮಾಡಿರುವುದು ತಪ್ಪು. 9ನೇ ಶೆಡ್ಯೂಲ್ ಗೆ ಸೇರಿಸದಿದ್ದರೆ ಅದಕ್ಕೆ ಕಾನೂನು ರಕ್ಷಣೆ ಸಿಗುವುದಿಲ್ಲ. ಮೀಸಲಾತಿ ಬಗ್ಗೆ ಬಿಜೆಪಿ ಸರ್ಕಾರ ಗೊಂದಲವನ್ನು ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular